ಕೆರೆ ಹೂಳೆತ್ತುವ ಸ್ಥಳಕ್ಕೆ ಸಿ.ವಿ ಚಂದ್ರಶೇಖರ ಭೇಟಿ
ಲೋಕದರ್ಶನ ವರದಿ
ಕೊಪ್ಪಳ 18: ತಾಲೂಕಿನ ಶಿವಪುರ ಗ್ರಾಮದ ಕೆರೆ ಹೂಳೆತ್ತುವ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯರಾದ ಸಿ.ವಿ ಚಂದ್ರಶೇಖರ ಅವರು ಭೇಟಿ ನೀಡಿದರು.
ನಂತರ ಸಿ.ವಿ ಚಂದ್ರಶೇಖರ ಮಾತನಾಡಿ ಇಂದು ಜಿಲ್ಲೆಯ ವಿವಿದೆಡೆ ಕೆರೆಯ ಹೂಳನ್ನು ರೈತರೇ ತೆಗೆಯುತ್ತಿದ್ದಾರೆ, ಸರಕಾರ ಮಾಡಬೇಕಾದ ಕೆಲಸವನ್ನು ರೈತರು ಮಾಡುತ್ತಿರುವುದು ಶ್ಲಾಘನೀಯ, ಸದಾ ನಾನು ನಿಮ್ಮ ಜೊತೆಯಲ್ಲಿ ಇದ್ದು ನನ್ನಿಂದಾಗುವ ಸೇವೆಯನ್ನು ಸಲ್ಲಿಸುತ್ತೇನೆ ಕೆರೆಯ ಹೂಳನ್ನು ತೆಗೆಯುವುದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಇಂತಹ ಸಾಮಾಜಿಕ ಕಾರ್ಯಗಳು ಹೀಗೆ ಹೆಚ್ಚಾಗಿ ಆಗಲಿ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹಾಲೇಶ್ ಕಂದಾರಿ, ವಸಂತ ನಾಯಕ ಸೇರಿದಂತೆ ಮಂಜುನಾಥ ಹುಲಿಹೈದರ್, ಹನುಮೇಶ ಅಂಗೋಟಿ, ಮಂಜುನಾಥ ಶೇಲ್ಲೂಡಿ, ಮಾರುತಿ ನಾಯಕ್, ಬೀರಪ್ಪ ಶೇಲೂಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಯುವಕರು ಉಪಸ್ಥಿತರಿದ್ದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 