ಅಂತರರಾಷ್ಟ್ರೀಯ

ಚಿಕಾಗೋದಲ್ಲಿ ಗುಂಡಿಟ್ಟು 7 ವರ್ಷದ ಬಾಲಕಿ ಹತ್ಯೆ

ಚಿಕಾಗೋದಲ್ಲಿ ಗುಂಡಿಟ್ಟು 7 ವರ್ಷದ ಬಾಲಕಿ ಹತ್ಯೆ

ವಾಷಿಂಗ್ಟನ್, ಎಪ್ರಿಲ್ 19 :ಚಿಕಾಗೋದ ಹೋಮನ್ ಸ್ಕ್ವೇರ್ ನೆರೆಹೊರೆಯ  ಮೆಕ್‌ಡೊನಾಲ್ಡ್ಸ್ ಡ್ರೈವ್-ಥ್ರೂನಲ್ಲಿ 7 ವರ್ಷದ ಬಾಲಕಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಘಟನೆಯನ್ನು  ಚಿಕಾಗೊ ಸನ್-ಟೈಮ್ಸ್ ವರದಿ ಮಾಡಿದೆ.  ಚಿಕಾಗೊ ಪೊಲೀಸರ ಪ್ರಕಾರ ದಂತೆ, ವೆಸ್ಟ್ ರೂಸ್‌ವೆಲ್ಟ್ ರಸ್ತೆಯ  ಮೆಕ್‌ಡೊನಾಲ್ಡ್ಸ್ ಪಾರ್ಕಿಂಗ್ ಸ್ಥಳದಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಇಬ್ಬರು ವಾಹನದಲ್ಲಿ  ಬಂದು ನಂತರ ಗುಂಡು ಹಾರಿಸಲು ಪ್ರಾರಂಭಿಸಿದಾಗ ಹುಡುಗಿ ಮತ್ತು ಆಕೆಯ ತಂದೆ ಕಾರಿನಲ್ಲಿ ಕುಳಿತಿದ್ದರು  ಎಂದೂ   ವರದಿಯಾಗಿದೆ. ಬಾಲಕಿಯ ಮೇಲೆ  ಅನೇಕ ಬಾರಿ ಗುಂಡು ಹಾರಿಸಲಾಗಿದ್ದು ಆಕೆಯನ್ನು ತಕ್ಷಣ  ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಕೆ  ಅಸ್ಪತ್ರೆಯಲ್ಲಿ ನಿಧನರಾದರು  ಎಂದೂ ಪೊಲೀಸರು ತಿಳಿಸಿದ್ದಾರೆ. ಹುಡುಗಿಯ ತಂದೆ ಇನ್ನೂ ಗಂಭೀರ ಸ್ಥಿತಿಯಲ್ಲಿದ್ದಾರೆ. 


ಸುದ್ದಿ ಓದಿ