ನೈಜೀರಿಯಾದಲ್ಲಿ ಪೊಲೀಸ್ ಠಾಣೆ ಮೇಲೆ ದಾಳಿ, 5 ಬಂದೂಕುಧಾರಿಗಳು ಹತ
ಅಬುಜಾ, ಜೂನ್ 7: ದಕ್ಷಿಣ ರಾಜ್ಯದ ಇಮೋ ರಾಜ್ಯದ ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯನ್ನು ನೈಜೀರಿಯನ್ ಪಡೆಗಳು ಮತ್ತು ಪೊಲೀಸ್ ಪಡೆ ತಡೆದಿದ್ದರೂ, ಘಟನೆಯಲ್ಲಿ 5 ಬಂದೂಕುದಾರಿಗಳು ಹತರಾಗಿದ್ದಾರೆಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. ಕಾನೂನುಬಾಹಿರ ಗುಂಪಾದ ಇಂಡಿಜೆನಸ್ ಪೀಪಲ್ ಆಫ್ ಬಿಯಾಫ್ರಾ (ಐಪಿಒಬಿ) ಈ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ ಎಂದು ವಕ್ತಾರ ಮೊಹಮ್ಮದ್ ಯೆರಿಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹತ್ಯೆಗೀಡಾದವರಲ್ಲಿ ಐಪಿಒಬಿಯ ಹಿರಿಯ ಸದಸ್ಯ ಜೋಸೆಫ್ ನ್ನಾಚಿ ಸೇರಿದ್ದಾರೆ. ಎಂದು ಹೇಳಲಾಗಿದೆ ದೇಶದ ದಕ್ಷಿಣ ಪ್ರದೇಶದಲ್ಲಿ "ಭದ್ರತಾ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳ ವಿರುದ್ಧ ಆತ ದಾಳಿ ಆಯೋಜಿಸುತ್ತಿದ್ದ ಎಂದು ಯೆರಿಮಾ ಹೇಳಿದ್ದಾರೆ. ಘಟನೆಯಲ್ಲಿ ಐಪಿಒಬಿಯ ಇನ್ನೊಬ್ಬ ಸದಸ್ಯನನ್ನು ಬಂಧಿಸಲಾಗಿದೆ, ನೈಜೀರಿಯಾದ ದಕ್ಷಿಣ ಭಾಗವು ಇತ್ತೀಚಿನ ತಿಂಗಳುಗಳಲ್ಲಿ ಪೊಲೀಸ್ ಠಾಣೆಗಳು ಮತ್ತು ಕಾರಾಗೃಹಗಳಂತಹ ಭದ್ರತಾ ಸಂಸ್ಥೆಗಳ ಮೇಲೆ ಸರಣಿ ಬಂದೂಕುಧಾರಿಗಳ ದಾಳಿ ನಡೆಯುತ್ತಿದೆ.