ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕೊರೋನ ಲಸಿಕೆಯ ನಂತರ 16 ಜನ ಸಾವು
ಮಾಸ್ಕೋ, ಫೆ .27 : ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಕರೋನ ಲಸಿಕೆ ಹಾಕಿದ ನಂತರ ಪ್ರತಿಕ್ರಿಯೆ ಉಂಟಾಗಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ ಎಂದು ಸ್ವಿಸ್ ಏಜೆನ್ಸಿ ಫಾರ್ ಥೆರಪೂಟಿಕ್ ಪ್ರಾಡಕ್ಟ್ಸ್ (ಸ್ವಿಸ್ಮೆಡಿಕ್) ತಿಳಿಸಿದೆ. ವಾಚ್‌ಡಾಗ್ ವರದಿಯ ಪ್ರಕಾರ 364 ಜನರಿಗೆ ಪ್ರತಿಕೂಲ ಪ್ರತಿಕ್ರಿಯೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಅವುಗಳಲ್ಲಿ 199 ಫಿಜರ್ ಮತ್ತು ಬಯೋಎನ್‌ಟೆಕ್ ಅಭಿವೃದ್ಧಿಪಡಿಸಿದ ಲಸಿಕೆಗೆ ಸಂಬಂಧಿಸಿವೆ ಎಂದು ಹೇಳಲಾಗಿದೆ. ಅವರ ಸರಾಸರಿ ವಯಸ್ಸು 86, ಮತ್ತು ಅವರಲ್ಲಿ ಹೆಚ್ಚಿನವರು ಗಂಭೀರ ಖಾಯಿಲೆಗಳಿಂದ ಬಳುತ್ತಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಿದೆ. ಏಜೆನ್ಸಿಯ ಅಧ್ಯಯನ ವರದಿಯ ಪ್ರಕಾರ ಲಸಿಕೆಯಿಂದ ಸಾವು-ನೋವುಗಳು ಸಂಭವಿಸಿಲ್ಲ ಹೃದಯರಕ್ತನಾಳ, ಶ್ವಾಸಕೋಶ ಕಾಯಿಲೆಗಳಿಂದ ಉಂಟಾಗಿದೆ. ಆದರೂ ಲಸಿಕೆಯೇ ಸಾವಿಗೆ ಕಾರಣವಾಗಿದೆ ಎಂಬುದಕ್ಕೆ ಯಾವುದೇ ದೃಡ ಪುರಾವೆಗಳಿಲ್ಲ ಎಂದು ಸ್ವಿಸ್ಮೆಡಿಕ್ ಹೇಳಿದೆ.