ಅಂತರರಾಷ್ಟ್ರೀಯ

ಕೊರೋನಾ ಸೋಂಕಿಗೆ 6 ಲಕ್ಷಕ್ಕೂ ಹೆಚ್ಚು ಬಲಿ : ಬೈಡೆನ್ ಆತಂಕ

ಕೊರೋನಾ ಸೋಂಕಿಗೆ 6 ಲಕ್ಷಕ್ಕೂ ಹೆಚ್ಚು ಬಲಿ :  ಬೈಡೆನ್ ಆತಂಕ

ವಾಷಿಂಗ್ಟನ್, ಜ 23 : ಕೊರೋನಾ ಸೊಂಕಿನಿಂದ ತತ್ತರಿಸಿರುವ  ಅಮೆರಿಕಾದಲ್ಲಿ ನೂತನ ಅಧ್ಯಕ್ಷ ಜೊ ಬೈಡನ್ ಕೊರೋನ ನಿಗ್ರಹ ಕುರಿತ ಹಲವು ಮಹತ್ವದ ಆಡಳಿತಾತ್ಮಕ ಆದೇಶಗಳಿಗೆ ಸಹಿ ಹಾಕಿದ್ದಾರೆ.ಮುಂದಿನ ತಿಂಗಳು ಕೊರೋನದಿಂದ  ಮೃತರ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗಿ ನಂತರ ಕೆಲ ತಿಂಗಳ ಬಳಿಕ 6 ಲಕ್ಷ ದಾಟಿ ಹೋಗಬಹುದು ಎಂಬ ಆತಂಕವನ್ನು ನೂತನ   ಅಧ್ಯಕ್ಷ  ಜೋ ಬೈಡೆನ್ ವ್ಯಕ್ತಪಡಿಸಿದ್ದಾರೆ. ಕೊರೋನಾ ಆರಂಭದಲ್ಲಿ 2 ಲಕ್ಷ ಜನ ಸಾಯಲಿದ್ದಾರೆ ಎಂದು ಹಿಂದಿನ ಅಧ್ಯಕ್ಷ ಡೋನಾಲ್ಡ್ ಟ್ರಂಪ್  ಹೇಳಿದ್ದರು

ಈಗ ಹೊಸ ಅಧ್ಯಕ್ಷ ಜೋಬೈಡೆನ್  ಪಟ್ಟಕ್ಕೆ ಕುಳಿತ 24 ಗಂಟೆಯಲ್ಲಿ ಕೊರೋನದಿಂದ  ದೇಶದಲ್ಲಿ  6 ಲಕ್ಷಕ್ಕೂ  ಜನ ಸಾಯಬಹುದು ಎಂಬ  ಆತಂಕ ತೋಡಿಕೊಂಡಿದ್ದಾರೆ.ಜಗತ್ತಿನಲ್ಲಿ  ಹೆಚ್ಚು ಸೋಂಕಿನ ಭಾದೆಗೆ ಒಳಗಾದ ದೇಶ ಅಮೆರಿಕವೇ ಆಗಿದೆ. ವಿದೇಶದಿಂದ ಅಮೆರಿಕಕ್ಕೆ ಬರುವವರು ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡುವ ಮೊದಲು ಕೋವಿಡ್ ಪರೀಕ್ಷೆ ಮಾಡಿಸಬೇಕಿದೆ.  ಮಾಸ್ಕ್ ಧರಿಸುವುದು ಮಾತ್ರವಲ್ಲದೆ, ಹೊರದೇಶಗಳಿಂದ ಬರುವ ಪ್ರತಿಯೊಬ್ಬರೂ ವಿಮಾನ ನಿಲ್ದಾಣದಿಂದ ಹೊರಬರುವ ಮುನ್ನ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಬೇಕು. ಜೊತೆಗೆ ನಂತರ ಇಲ್ಲಿ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಗಾಗಬೇಕು ಎಂಬ ಹೊಸ  ಆದೇಶಕ್ಕೂ ಬೈಡನ್  ಸಹಿ ಹಾಕಿದ್ದಾರೆ. 



ಸುದ್ದಿ ಓದಿ