ಕೋವಿಡ್ : ಜಾಗತಿಕವಾಗಿ ಮೂರು ಕೋಟಿ ಜನ ಬಲಿ
ವಾಷಿಂಗ್ಟನ್, ಏಪ್ರಿಲ್ 9 : ಕೊರೋನ ಕಾರಣದಿಂದ ವಿಶ್ವದಲ್ಲಿ ಈವರೆಗೆ ಮಾರಕ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 2.893 ಮಿಲಿಯನ್‌ಗಳಿಗೆ ತಲುಪಿದೆ(ಸರಿ ಸುಮಾರು 3 ಕೋಟಿ) ವಿಶ್ವದಲ್ಲಿ ಈವರೆಗೆ ಸುಮಾರು 133.5 ಮಿಲಿಯನ್ ಪ್ರಕರಣಗಳು ದಾಖಲಾಗಿವೆ. ಎಂದು ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯವು ತನ್ನ ಇತ್ತೀಚಿನ ವರದಿ ಹೇಳಿದೆ. ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಡೇಟಾವನ್ನು ಪತ್ತೆಹಚ್ಚುವ ಮತ್ತು ಸಂಗ್ರಹಿಸುವ ಅಗ್ರಗಣ್ಯ ಮತ್ತು ವಿಶ್ವಾಸಾರ್ಹ ಜಾಗತಿಕ ಸಂಸ್ಥೆಯಾಗಿದೆ. ಗುರುವಾರದವರೆಗೆ ಜಾಗತಿಕವಾಗಿ 2,893,583 ಸಾವುಗಳು ಸೇರಿದಂತೆ 133,499,369 ಪ್ರಕರಣಗಳು ದಾಖಲಾಗಿವೆ. ಅಮೆರಿಕ ವಿಶ್ವದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದ್ದು ಈವರೆಗೆ ಸುಮಾರು 6 ಲಕ್ಷ ಜನರು ಮಾರಕ ಸೋಂಕಿಗೆ ಬಲಿಯಾಗಿದ್ದಾರೆ. ಮೂರು ಕೋಟಿಗೂ ಹೆಚ್ಚು ಜನರು ಬಾದೆಗೆ ಒಳಗಾಗಿದ್ದಾರೆ.