ಅಂತರರಾಷ್ಟ್ರೀಯ

ಸ್ಫುಟ್ನಿಕ್ ಲಸಿಕೆ : ಭಾರತದಲ್ಲಿ ಆಗಸ್ಟ್ ವೇಳೆಗೆ ಉತ್ಪಾದನೆ

ಸ್ಫುಟ್ನಿಕ್ ಲಸಿಕೆ :  ಭಾರತದಲ್ಲಿ  ಆಗಸ್ಟ್ ವೇಳೆಗೆ  ಉತ್ಪಾದನೆ

ಮಾಸ್ಕೋ, ಮೇ 23: ಕರೋನ ನಿಯಂತ್ರಿಸುವ ರಷ್ಯಾದ ಸ್ಫುಟ್ನಿಕ್ ಲಸಿಕೆ, ಭಾರತದಲ್ಲಿ ಬರುವ ಆಗಸ್ಟ್ ವೇಳೆಗೆ ಭಾರತದಲ್ಲಿ ಉತ್ಪಾದನೆಯಾಗುವ ಸಾಧ್ಯತೆಯಿದೆ. ಈ ವಿಷಯವನ್ನು ರಷ್ಯಾದಲ್ಲಿನ  ಭಾರತೀಯ ರಾಯಭಾರಿ ಡಿ.ಬಾಲಾ ವೆಂಕಟೇಶ್ ವರ್ಮಾ ರಷ್ಯಾದಲ್ಲಿ ಬಹಿರಂಗಪಡಿಸಿದ್ದಾರೆ.ಈ ಸಂಬಂಧ ರಷ್ಯಾ, ಲಸಿಕೆ ಉತ್ಪಾದನೆ ಮಾಡಲು ಭಾರತಕ್ಕೆ ಅಗತ್ಯ ಪರವಾನಗಿಯನ್ನು ನೀಡಲಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ್ದಾರೆ. ಮುಂದಿನ ತಿಂಗಳ ಕೊನೆಯ ವಾರದ ವೇಳೆಗೆ ಭಾರತಕ್ಕೆ ಐದು ಲಕ್ಷ ಡೋಸ್ ಲಸಿಕೆಗಳನ್ನು ಕಳುಹಿಸಿಕೊಡುವ ಗುರಿಯನ್ನು ರಷ್ಯಾ ಸರ್ಕಾರ ಹೊಂದಿದೆ. ಭಾರತದಲ್ಲಿ ಹೈದರಾಬಾದಿನ ರೆಡ್ಡಿ ಲ್ಯಾಬೊರೇಟರಿ, ಲಸಿಕೆ ಉತ್ಪಾದನೆ ಜವಾಬ್ದಾರಿ ಹೊಣೆ ಹೊತ್ತಿದೆ. ಸದ್ಯ ಹೈದರಾಬಾದ್ ನಗರದಲ್ಲಿ ಮಾತ್ರ ಈ ಲಸಿಕೆ ಲಭ್ಯವಾಗುತ್ತಿದೆ. 


ಸುದ್ದಿ ಓದಿ