ಕೊರೊನಾ ನಿಗ್ರಹ, ಮುಂAಚೂಣಿಯಲ್ಲಿ ಭಾರತ: ಗೀತಾ ಗೋಪಿನಾಥ್ ಮೆಚ್ಚುಗೆ
ವಿಶ್ವಸಂಸ್ಥೆ, ಮಾರ್ಚ್ 9: ಕೊರೊನಾ ನಿಗ್ರಹ ಹೋರಾಟ ಮತ್ತು ಲಸಿಕೆ ತಯಾರಿಕೆ ಮತ್ತು ಪೂರೈಕೆಯಲ್ಲಿ ವಿಶ್ವದಲ್ಲಿ ಭಾರತವೇ ಬಹಳ ಮುಂಚೂಣಿಯಲ್ಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೋವಿಡ್-19 ಲಸಿಕೆಗಳ ಉತ್ಪಾದನೆ ಮತ್ತು ಇತರೆ ಅನೇಕ ದೇಶಗಳಿಗೆ ಅವುಗಳನ್ನು ಪೂರೈಕೆ ಮಾಡುವ ಮೂಲಕ ಈ ಬಿಕ್ಕಟ್ಟಿನಲ್ಲಿ ಬಹಳ ಮುಖ್ಯ ಪಾತ್ರವಹಿಸುತ್ತಿದೆ ಎಂದು ಅವರು ಶ್ಲಾಘಿಸಿದ್ದಾರೆ.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶ್ವಸಂಸ್ಥೆಯಲ್ಲಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಗತ್ತಿನ ಲಸಿಕೆಗಳಿಗೆ ಒಂದು ನಿಖರವಾದ ಉತ್ಪಾದನಾ ಕೇಂದ್ರ ಎಲ್ಲಿದೆ ಎಂದು ನೋಡಿದರೆ ಅದು ಭಾರತವೇ ಆಗಿದೆ. ಜೊತೆಗೆ ಪುಣೆಯ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಾರ್ಯದ ಬಗ್ಗೆಯೂ ಅವರು ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು