ಅಂತರರಾಷ್ಟ್ರೀಯ

ರಷ್ಯಾದಲ್ಲಿ ಪ್ರಾಣಿಗಳಿಗೂ ಕರೋನ ಲಸಿಕೆ…!!

ರಷ್ಯಾದಲ್ಲಿ ಪ್ರಾಣಿಗಳಿಗೂ ಕರೋನ ಲಸಿಕೆ…!!

ಮಾಸ್ಕೋ,  ಮೇ 27 : ರಷ್ಯಾದಲ್ಲಿ ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಸಹ ಕೊರೋನಾ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಜಗತ್ತಿನ ಅನೇಕ ರಾಷ್ಟ್ರಗಳಲ್ಲ್ಲಿ ಮನುಷ್ಯರಿಗೆ ಸರಿಯಾದ ಕಾಲದಲ್ಲಿ ಲಸಿಕೆ ಸಿಗದೇ ತೊಂದರೆ ಪಡುತ್ತಿರುವಾಗ ರಷ್ಯಾದಲ್ಲಿ ಪ್ರಾಣಿಗಳಿಗೂ ಲಸಿಕೆ ಸಿಕ ನೀಡಲಾಗುತ್ತಿದೆ. ದೇಶದಲ್ಲಿ  ಪ್ರಾಣಿಗಳಿಗೂ ಲಸಿಕೆ ನೀಡುವ ಕೆಲಸ  ಪ್ರಾರಂಭವಾಗಿದೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾ ಮಾರ್ಚ್ ನಲ್ಲಿ ಜಗತ್ತಿನ ಮೊದಲ ಪ್ರಾಣಿಗಳ ಕಾರ್ನಿವಾಕ್ ಕೋವ್ ಲಸಿಕೆಯನ್ನು ನೋಂದಾಯಿಸಿರುವುದಾಗಿ  ಹೇಳಿತ್ತು.ದೇಶದ ಹಲವು  ಪಶು ಚಿಕಿತ್ಸಾಲಯಗಳಲ್ಲಿ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ ಎಂದು ರಷ್ಯಾದ ವೆಟನರಿ  ವಾಚ್ ಡಾಗ್ ಮಾಹಿತಿ ನೀಡಿದೆ. ಮತ್ತೊಂದೆಡೆ ಕಾರ್ನಿವಾಕ್ ಕೋವ್ ಲಸಿಕೆ ಬಗ್ಗೆ ಯುರೋಪಿಯನ್ ಒಕ್ಕೂಟ, ಅರ್ಜೈಂಟೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್ ಕೂಡಾ ಆಸಕ್ತಿ ವಹಿಸಿದೆ ಎಂದೂ ಹೇಳಲಾಗಿದೆ. 





ಸುದ್ದಿ ಓದಿ