ಕರೋನ ಅಬ್ಬರ, ಭಾರತಕ್ಕೆ ಪ್ರಯಾಣ ಮಾಡದಂತೆ ಅಮೆರಿಕ ತಾಕೀತು
ವಾಷಿಂಗಟ್ಟನ್ , ಏಪ್ರಿಲ್ 20 : ಭಾರತದಲ್ಲಿ ಕೊರೊನ ಪ್ರಕರಣಗಳ ಹೆಚ್ಚಾಗುತ್ತಿರುವ ಕಾರಣ ಅಮೆರಿಕದ ನಾಗರಿಕರು ನಾಗರಿಕರು ಭಾರತಕ್ಕೆ ಪ್ರಯಾಣ ಮಾಡದಂತೆ ಸಲಹೆ ಮಾಡಿದೆ. ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ (ಸಿಡಿಸಿ) ತನ್ನ ನಾಗರಿಕರಿಗೆ ಈ ಸಲಹೆ ನೀಡಿದೆ. ಬ್ರಿಟನ್ ಸಹ ಇದೆ ರೀತಿ ನಿರ್ಬಂಧ ಹಾಕಿದ್ದು ಅದರ ಜೊತೆಗೆ ಈಗ ಅಮೆರಿಕ ಸಹ ಸೇರಿಕೊಂಡಿದೆ. ಸಿಡಿಸಿ ತನ್ನ ಸಲಹೆಯಲ್ಲಿ, ಭಾರತದಲ್ಲಿ ಕೋವಿಡ್-19 ಹರಡುವಿಕೆ ಹೆಚ್ಚಿನ ಮಟ್ಟದಲ್ಲಿದ್ದು, ಪ್ರಸ್ತುತ ಇಲ್ಲಿನ ಪರಿಸ್ಥಿತಿಯ ಕಾರಣದಿಂದಾಗಿ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೂ ಸಹ ರೂಪಾಂತರಿ ಸೋಂಕು ತಗಲುವ ಅಪಾಯವಿದೆ ಹೀಗಾಗಿ ಭಾರತಕ್ಕೆ ತೆರಳದಂತೆ ಸಲಹೆಮಾಡಿದೆ.ತೀರಾ ಅನಿವಾರ್ಯವಾಗಿ ಪ್ರಯಾಣಿಸ ಬೇಕೆಂದಾದರೆ, ಪ್ರಯಾಣಕ್ಕೂ ಮುನ್ನ ಮೊದಲು ಸಂಪೂರ್ಣ ಲಸಿಕೆ ಪಡೆದಿರಬೇಕು. ಬ್ರಿಟನ್ ಭಾರತವನ್ನು ಸೋಮವಾರ ಕೆಂಪು ಪಟ್ಟಿಗೆ ಸೇರಿಸಿ ಘೋಷಿಸಿದೆ . ಯುಕೆ ಅಥವಾ ಐರಿಷ್ ಪ್ರಜೆಗಳನ್ನು ಹೊರತುಪಡಿಸಿ ಭಾರತದಿಂದ ಬರುವ ಪ್ರಯಾಣಿಕರನ್ನು ನಿಷೇಧಿಸಿದೆ.