ಅಂತರರಾಷ್ಟ್ರೀಯ

ಕೊರೋನ ಅಟ್ಟಹಾಸ: ಬ್ರೆಜಿಲ್‌ನಲ್ಲಿ 3.60 ಲಕ್ಷ ಜನ ಸಾವು

ಕೊರೋನ  ಅಟ್ಟಹಾಸ:   ಬ್ರೆಜಿಲ್‌ನಲ್ಲಿ 3.60 ಲಕ್ಷ ಜನ ಸಾವು

ಬ್ರೆಸಿಲಿಯಾ, ಎಪ್ರಿಲ್ 15 : ಬ್ರೆಜಿಲ್ ನಲ್ಲಿ ಕಳೆದ  24 ಗಂಟೆಗಳಲ್ಲಿ ಕೊರೋನ ಸೋಂಕಿಗೆ  3,459 ಜನರು ಮೃತಪಟ್ಟಿದ್ದಾರೆ . ಪರಿಣಾಮ ದೇಶದಲ್ಲಿ ಈವರೆಗೆ ಮೃತಪಟ್ಟವರ  ಸಂಖ್ಯೆ  3ಲಕ್ಷ 61,884 ಕ್ಕೆ ಏರಿಕೆಯಾಗಿದೆ ಎಂದು ಎಂದು ರಾಷ್ಟ್ರೀಯ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಇದೇ  ಅವಧಿಯಲ್ಲಿ  ದೃಡಪಡಿಸಿದ ಸೋಂಕು  ಪ್ರಕರಣಗಳ ಸಂಖ್ಯೆ   73,513 ರಿಂದ 13,673,507 ಕ್ಕೆ ಏರಿಕೆಯಾಗಿದೆ. ಸೋಂಕು ದೇಶದಲ್ಲಿ ಏಕಾಏಕಿ ಪ್ರಾರಂಭವಾದಾಗಿನಿಂದ 12.17 ದಶಲಕ್ಷಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ. ಕರೋನ ಸೋಂಕಿನಿಂದ  ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಬ್ರೆಜಿಲ್ ಎರಡನೇ ಸ್ಥಾನದಲ್ಲಿದೆ. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ -19 ಅನ್ನು   ಸಾಂಕ್ರಾಮಿಕ ರೋಗ ವೆಂದು ಘೋಷಣೆ ಮಾಡಿತ್ತು. 



ಸುದ್ದಿ ಓದಿ