ಅಯ್ಯಪ್ಪಸ್ವಾಮಿ ದೇವಸ್ಥಾನ ಲೋಕಾರ್ಪಣೆ
ಲೋಕದರ್ಶನ ವರದಿ
ಶಿಗ್ಗಾವಿ11 : ದೂರದ ಶಕ್ತಿ, ಆ ಶಕ್ತಿಯಲ್ಲಿಯೇ ವಿಶೇಷ ಭಕ್ತಿ ಅಡಗಿದೆ, ಭಕ್ತಿ ಭಾವ ಅಪೂರ್ಣವಾಗಬಾರದು ಅದು ಸಂಪೂರ್ಣವಾಗಬೇಕು ಅಂದಾಗ ಭಗವಂತನ ಒಲಿಸಿಕೊಳ್ಳಲು ಸಾಧ್ಯವಿದೆ, ಭಕ್ತಿ ಎಂದರೆ ಉತ್ಕೃಷ್ಟ ಪ್ರೀತಿ, ಭಕ್ತಿಯಲ್ಲಿಯೇ ದೈವಿ ಶಕ್ತಿ ಅಡಗಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ಪಟ್ಟಣದ ಅಂಚೆ ಕಚೇರಿಯ ಹತ್ತಿರವಿರುವ ಅಯ್ಯಪ್ಪ ಸ್ವಾಮಿ ಸೇವಾ ಸಮೀತಿ ಶಿಗ್ಗಾವಿ ವತಿಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನ ಲೋಕಾರ್ಪಣೆ ಮತ್ತು ಗಣಪತಿ ಶ್ರೀ ಅಯ್ಯಪ್ಪಸ್ವಾಮಿ, ಸುಭ್ರಮಣ್ಯಸ್ವಾಮಿ ನೂತನ ಮೂತರ್ಿಗಳ ಪ್ರಾಣ ಪ್ರತಿಷ್ಟಾಪನಾ ಹಾಗೂ ಕಳಸಾರೋಹಣ ಕಾರ್ಯಕ್ರಮದ ನಂತರ ನಡೆದ ಧರ್ಮಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಷ್ಟ ಪಟ್ಟು ಪಡೆಯುವ ದೇವರ ದರ್ಶನಕ್ಕೆ ಭಕ್ತರು ಬಹಳ, ಇದು ದೇವರು ಮತ್ತು ಭಕ್ತರ ನಡುವಿನ ವಿಶೇಷ ಸಂಬಂದ ಹೊಂದಿದೆ. ಶಬರಿಮಲೈಯಲ್ಲಿ ಮಹಿಳೆಯರಿಗೆ ನಿಷೇದ ಇಂದು ಭಕ್ತಿ ಮತ್ತು ಕಾನೂನಿನ ನಡುವೆ ಸಂಘರ್ಷ ಕಂಡು ಬಂದಿದೆ, ಈ ರೀತಿಯ ಸಂಘರ್ಷಗಳು ಹೊಸ ವಿಧಾನಗಳು ಗಟ್ಟಿಗೊಳ್ಳಲು ಪ್ರೇರಣೆ ಮತ್ತು ನಾಂಧಿಯಾಗಬಲ್ಲವು ಎಂದರು.
ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ಮಾತನಾಡಿ ಭಾರತ ದೇಶ ಮಠ ಮಂದಿರಗಳನ್ನು ಹೊಂದಿದ ವಿಶೇಷ ಮತ್ತು ಪವಿತ್ರ ಪರಂಪರೆಯುಳ್ಳ ದೇಶವಾಗಿದೆ, ನಾವು ದೇವಾಲಯಗಳಿಗೆ ನೀಡಿದ ಮಹತ್ವವನ್ನು ಆತ್ಮವುಳ್ಳ ದೇಹಕ್ಕೂ ನೀಡಬೇಕಿದೆ ಎಂದು ಹೇಳಿದರು.
ಬಂಕಾಪೂರ ಅರಳೆಲೆಮಠದ ರೇವಣಶಿದ್ದೇಶ್ವರ ಶಿವಾಚಾರ್ಯರು ಮಾತನಾಡಿ ನಮ್ಮ ಹುಟ್ಟಿಗೆ ಕಾರಣರಾದ ನಮ್ಮ ತಂದೆ-ತಾಯಿಗಳೇ ನಮಗೆ ಜೀವನದಲ್ಲಿ ದೇವರುಗಳು, ಅವರಿಗೆ ಮೊದಲು ನಮ್ಮ ಶ್ರಮ ಹಾಕಬೇಕು ಅಂದಾಗ ನಮ್ಮ ಜೀವನದ ಫಲ ನಮ್ಮದಾಗುತ್ತದೆ, ಅಂತ:ಕರಣದ ಪ್ರೀತಿಯನ್ನು ತಂದೆತಾಯಿಗಳಿಂದ ಮಾತ್ರ ಪಡೆಯಲು ಸಾದ್ಯ ಎಂದರು.
ಶಿಗ್ಗಾವಿ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ದೇವಿ ಪುರಾಣದಲ್ಲಿ 18 ಅದ್ಯಾಯಗಳಿದ್ದು ಅದೆ ತರನಾಗಿ ಅಯ್ಯಪ್ಪಸ್ವಾಮಿಯ ಸನ್ನಿಧಿಯಲ್ಲಿ 18 ಮೆಟ್ಟಿಲುಗಳಿವೆ ಒಂದೋಂದು ಮೆಟ್ಟಿಲುಗಳೂ ಸಹಿತ ಒಂದೊಂದು ವಿಶೇಷ ಅದ್ಯಾಯವನ್ನು ಹೊಂದಿವೆ ಎಂದು ಮಾಮರ್ಿಕವಾಗಿ ನುಡಿದರು.
ಗಂಜೀಗಟ್ಟಿ ಮಠದ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜದ ಪ್ರಧಾನ ಕಾರ್ಯದಶರ್ಿ ಎಸ್ ಎನ್ ಕೃಷ್ಣಯ್ಯಸ್ವಾಮಿ, ಶಬರಿಮಲೈ ಅಯ್ಯಪ್ಪ ಸ್ವಾಮಿ ಸೇವಾ ಸಮಾಜದ ಪಿ ಎಮ್ ರಾಜಗುರುಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿವಾನಂದ ಬಾಕರ್ಿ, ಮಾರುತಿ ಹರಿಹರ, ಆರ್ ಎ ನವೀನಕುಮಾರ, ಅಯ್ಯಪ್ಪ ಸ್ವಾಮಿ ಸೇವಾ ಸಮೀತಿ ಅದ್ಯಕ್ಷ ರಾಮು ಪೂಜಾರ, ಉಪಾದ್ಯಕ್ಷ ಮಂಜುನಾಥ ಬಾಣದ, ಗೌರವಾದ್ಯಕ್ಷ ನಾಗರಾಜ ಬ್ರಹ್ಮಾವರ, ಕಾರ್ಯದಶರ್ಿ ರಾಜು ಅಂಗಡಿ, ಖಜಾಂಚಿ ಚಂದ್ರಶೇಖರ ಗುಂಡಣ್ಣವರ, ನಾಗೇಂದ್ರ ಅಗಡಿ, ರಾಘು ಪಾಲಂಕರ, ರವಿ ಭಜಂತ್ರಿ, ನಾರಾಯಣ ಭಟ್ಟರು, ಮಂಜುನಾಥ ಗಣಪ್ಪನವರ, ಬೀಮಣ್ಣ ಗುರುಸ್ವಾಮಿ ಸೇರಿದಂತೆ ಸಮೀತಿಯ ಸರ್ವ ಸದಸ್ಯರು ಹಾಜರಿದ್ದರು, ಪ್ರೋ. ಎಸ್ ವಿ ಪೂಜಾರ ನಿರೂಪಿಸಿ ವಂದಿಸಿದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 