ಅಣ್ಣ ಬಸವಣ್ಣನ ವಚನ ಸಾಹಿತ್ಯ ನಮಗೆ ದಾರಿ ದೀಪ
ಎಲಿಮುನ್ನೋಳಿಯಲ್ಲಿ ಬಸವ ಜಯಂತಿ ಪ್ರವಚನ ನೀಡಿದ ಮಾತೋಶ್ರೀ ಶೋಭಾ ತಾಯಿ
ಹುಕ್ಕೇರಿ 20: ಮನುಷ್ಯನಿಗೆ ಹುಟ್ಟು ಆಕಸ್ಮಿಕ ಆದರೆ ಸಾವು ಮಾತ್ರ ಖಚಿತ ಆದರೆ ಎರಡೂ ನಮ್ಮ ಕೈಯಲ್ಲಿಲ್ಲ. ಇರುವದು ಬದುಕು ಮಾತ್ರ ನಮ್ಮ ಕೈಯಲ್ಲಿರುವದು. ಜೀವನದಲ್ಲಿ ಬದುಕುವದು ಮುಖ್ಯವಲ್ಲ ಬಿದ್ದವರನ್ನು ಎಬ್ಬಿಸುವದರ ಜೊತೆಗೆ ಸಂಸ್ಕಾರ, ದಾನ ಧರ್ಮ, ದೇವರ ನಾಮ ಸ್ಮರಣೆ ಮುಖ್ಯವಾಗಿದ್ದು ಇವು ಇದ್ದರೆ ನೆಮ್ಮದಿ ಬದುಕು ಸಾಧ್ಯವೆಂದು ನಿಡಸೋಸಿ ಹಿರೇಮಠದ ಮಾತೋಶ್ರೀ ಶೋಭಾ ತಾಯಿಯವರು ತಿಳಿಸಿದರು.
ಅವರು ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಬಸವೇಶ್ವರ ಮಹಾಮಂಟಪದಲ್ಲಿ ಬಸವ ಜಯಂತಿ ಅಂಗವಾಗಿ ಐದು ದಿನಗಳ ವರೆಗೆ ಹಮ್ಮಿಕೊಳ್ಳಲಾದ ಅಧ್ಯಾತ್ಮ ಪ್ರವಚನದ ರಸದೌತನ ನೀಡುತ್ತ ಮಾತನಾಡಿದರು. ತಿಳುವಳಿಕೆಯಿಂದ ಬದುಕಿದರೆ ಅದೇ ನಿಜವಾದ ಬದುಕು. ಅಣ್ಣ ಬಸವಣ್ಣನ ವಚನ ಸಾಹಿತ್ಯ ನಮಗೆ ದಾರಿ ದೀಪವಾಗಿದ್ದು ಅದನ್ನು ಜೀವನದಲ್ಲಿ ಅಳವಡಿಸಿದರೆ ಮಾತ್ರ ಬಸವ ಜಯಂತಿ ಆಚರಿಸಿದ್ದು ಸಾರ್ಥಕವೆಂದರು. ದೇವರ ನಾಮಸ್ಮರಣೆ ಮಾಡಿದರೆ ಬದುಕು ಹಸನಾಗುತ್ತದೆಯೆಂದ ಅವರು ಹೂವು ಮುಂಜಾನೆ ಅರಳಿ ಸಂಜೆ ಬಾಡಿ ಹೋಗುತ್ತದೆ. ಆದರೆ ಅದು ಸುವಾಸನೆ ಬೀರಿ ದೇವರ ಮುಡಿಯೇರುತ್ತದೆ ಮನುಷ್ಯ ಮಣ್ಣಲ್ಲಿ ಮಣ್ಣಾಗಿ ಹೊಗುತ್ತಾನೆ ಆತ ಜೀವನದುದ್ದಕ್ಕೂ ದಾನ ಧರ್ಮ, ದೇವರ ನಾಮ ಸ್ಮರಣೆ ಮಾಡಿದರೆ ಆತನಿಗೆ ಮೊಕ್ಷ ದೊರೆಯುತ್ತದೆಯೆಮದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಹುಕ್ಕೇರಿ ವಿರಕ್ತಮಠ ಹಾಗೂ ಹಾವೇರಿ ಮಠದ ಶಿವಬಸವ ಸ್ವಾಮಿಗಳು ಆಶೀರ್ವಚನ ನೀಡಿದರು. ಬಸವ ಜಯಂತಿ ನಿಮಿತ್ತ ಐದು ದಿನಗಳ ವರೆಗೆ ವಿವಿಧ ಧಾಮರ್ಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ