ಪ್ರಾ.ಕೃ.ಪ.ಸ ಸಂಘದ ನೂತನ ಅಧ್ಯಕ್ಷರಾಗಿ ಅಳ್ಳಳ್ಳಿ ಮಂಜುನಾಥ ಆಯ್ಕೆ
ಕಂಪ್ಲಿ 22: ತಾಲೂಕಿನ ದೇವಸಮುದ್ರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಳ್ಳಳ್ಳಿ ಮಂಜುನಾಥ ಮತ್ತು ಉಪಾಧ್ಯಕ್ಷರಾಗಿ ಗಾದಿಗನೂರು ಹಂಪಮ್ಮ ಅವಿರೋಧವಾಗಿ ಆಯ್ಕೆಗೊಂಡರು. ಇಲ್ಲಿನ ಸಹಕಾರ ಸಂಘದ ಕಛೇರಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರೂ ನಾಮಪತ್ರ ಸಲ್ಲಿಸಿದ ಹಿನ್ನಲೆ ನೂತನವಾಗಿ ಅಧ್ಯಕ್ಷರಾಗಿ ಎ.ಮಂಜುನಾಥ ಮತ್ತು ಉಪಾಧ್ಯಕ್ಷರಾಗಿ ಗಾದಿಗನೂರು ಹಂಪಮ್ಮ ನೇಮಕಗೊಂಡಿದ್ದಾರೆಂದು ಚುನಾವಣಾಧಿಕಾರಿ ರಮೇಶ ಘೋಷಿಸಿದರು. ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರೆ್ಣಯೊಂದಿಗೆ ಗೌರವಿಸಿದರು.
ಸಂಘದ ಮುಖ್ಯಕಾರ್ಯನಿರ್ವಾಹಕ ಎಸ್.ಎಸ್.ನಾಗರಾಜ, ನಿರ್ದೇಶಕರಾದ ನೀಲಕಂಠಪ್ಪ, ಕೆ.ತಿ್ೇರುದ್ರ್ಪ, ಜಿ.ಗಣೇಶಗೌಡ, ಸಿ.ಕೆ.ಸೋಮಶೇಖರ್, ಎಸ್.ಎಸ್.ಮಲ್ಲಿಕಾರ್ಜುನ, ಗುಬಾಜಿ ನಾಗರಾಜ, ಕೊರವರ ಹುಲುಗಪ್ಪ, ಈ.ಅನ್ನಪೂರ್ಣ, ನಾಯಕರ ತಿಪ್ಪೇಸ್ವಾಮಿ, ಸಣಾಪುರ ಪಾರ್ವತಿ, ಕೆ.ಚಂದ್ರರೆಡ್ಡಿ(ಬ್ಯಾಂಕ್ ಪ್ರತಿನಿಧಿ), ಬಿಡಿಸಿಸಿ ಜಿಲ್ಲಾ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಕಂಪ್ಲಿ ವೀರಶೈವ ಸಂಘದ ಅಧ್ಯಕ್ಷ ಎಸ್.ಎಂ.ನಾಗರಾಜ, ಕಂಪ್ಲಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಗುಬಾಜಿ ನಾಗರಾಜ, ಮುಖಂಡರಾದ ಜಿ.ಲಿಂಗನಗೌಡ, ಕಡೇಮನಿ ಪಂಪಾಪತಿ, ಜಿ.ಮಲ್ಲಿಗೌಡ, ನಾಯಕರ ವೆಂಕೋಬ, ಎಚ್.ಗುಂಡಪ್ಪ, ವಿ.ಎಲ್.ಬಾಬು, ಹೊನ್ನೂರಸಾಬ್ ಸೇರಿದಂತೆ ಸಹಕಾರ ಸಮಘದ ಸದಸ್ಯರು, ರೈತರು ಹಾಗೂ ಸಿಬ್ಬಂದಿ ಇದ್ದರು.