ಅಂತರರಾಷ್ಟ್ರೀಯ

ಕೋವಿಡ್ 19 : ಬ್ರಿಟನ್ ಗೆ ವೈಮಾನಿಕ ಹಾರಾಟ ನಿಷೇಧ ಅವಧಿ ವಿಸ್ತರಿಸಿದ ರಷ್ಯಾ

ಕೋವಿಡ್ 19 : ಬ್ರಿಟನ್ ಗೆ ವೈಮಾನಿಕ ಹಾರಾಟ ನಿಷೇಧ ಅವಧಿ ವಿಸ್ತರಿಸಿದ ರಷ್ಯಾ

ಮಾಸ್ಕೋ, ಜ 12:  ಕೋರೋನಾ ಸಾಂಕ್ರಾಮಿಕ ನಿಯಂತ್ರಿಸುವ ನಿಟ್ಟಿನಲ್ಲಿ ಯುನೈಟೆಡ್ ಕಿಂಗ ಡಮ್ ಜತೆಗಿನ  ವೈಮಾನಿಕ ಹಾರಾಟ ನಿಷೇಧ ಅವಧಿಯನ್ನುರಷ್ಯಾ ವಿಸ್ತರಿಸಿದೆ. ಯುನೈಟೆಡ್ ಕಿಂಗ್ ಡಮ್ ನೊಂದಿಗೆ ರಷ್ಯಾ ಈಗಾಗಲೇ ಹೊರಡಿಸಿರುವ  ವಿಮಾನಯಾನ ನಿಷೇಧವನ್ನು ಫೆಬ್ರವರಿ 1 ರವರೆಗೆ ವಿಸ್ತರಿಸಿದೆ ಎಂದು ಕೊರೋನಾ ವೈರಸ್ ಪ್ರತಿಕ್ರಿಯೆ ಕೇಂದ್ರ ಮಂಗಳವಾರ ತಿಳಿಸಿದೆ. ಕೊರೋನಾ ವೈರಸ್ ಸಾಂಕ್ರಾಮಿಕ ಒತ್ತಡ ಹೆಚ್ಚಿದ ಕಾರಣ, ಡಿಸೆಂಬರ್ 22 ರಂದು, ರಷ್ಯಾ ಜನವರಿ 12 ರವರೆಗೆ ಯುಕೆ ಜೊತೆಗಿನ ವಾಯುಯಾನವನ್ನು ಸ್ಥಗಿತಗೊಳಿಸಿತ್ತು. ದೇಶದ ಜನರ ಆರೋಗ್ಯದ ದೃಷ್ಟಿಯಿಂದ ಯುನೈಟೆಡ್ ಕಿಂಗ್ ಡಮ್ ಜತೆಗಿನ ವಿಮಾನಯಾನ ಹಾರಾಟದ ನಿಷೇಧವನ್ನು ವಿಸ್ತರಿಸಲಾಗಿದೆ ಎಂದು ಕೊರೋನಾ ವೈರಸ್ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ. 

 

ಸುದ್ದಿ ಓದಿ