ಭಾರತ, ಪಾಕ್ ಪ್ರಯಾಣಿಕ ವಿಮಾನ ಸಂಚಾರಕ್ಕೆ ನಿಷೇಧ ಹಾಕಿದ ಕೆನಡಾ
ಒಟ್ಟಾವಾ, ಏಪ್ರಿಲ್ 23: ಕೊರೋನ ಹೆಚ್ಚುತ್ತಿರುವ ಕಾರಣ ಭಾರತ ಮತ್ತು ಪಾಕಿಸ್ತಾನದಿಂದ ಬರುವ ಎಲ್ಲಾ ಪ್ರಯಾಣಿಕ ವಿಮಾನಗಳು ಮುಂದಿನ 30 ದಿನಗಳ ವರೆಗೆ ದೇಶ ಪ್ರವೇಶ ಮಾಡದಂತೆ ಕೆನಡಾ ನಿ಼ಷೇಧ ಮಾಡಿದೆ. ಉಭಯ ದೇಶಗಳಲ್ಲಿ ಕೊರೋನ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿದ್ದು, ಆ ದೇಶಗಳಿಂದ ನೇರ ಪ್ರಯಾಣಿಕರ ವಾಯು ಸಂಚಾರನಿಲ್ಲಿಸುವಂತೆ ನೋಟಾಮ್ಗೆ ನೋಟಿಸ್ ನೀಡಲಾಗಿದೆ ಎಂದು ಕೆನಡಾದ ಸಾರಿಗೆ ಸಚಿವ ಒಮರ್ ಅಲ್ಘಬ್ರಾ ಹೇಳಿದ್ದಾರೆ. ದಕ್ಷಿಣ ಏಷ್ಯಾದ ಎರಡು ದೇಶಗಳಿಂದ ಸಕಾರಾತ್ಮಕ ಪರೀಕ್ಷಾ ಫಲಿತಾಂಶಗಳೊಂದಿಗೆ ಹೆಚ್ಚಿನ ಪ್ರಯಾಣಿಕರು ಕೆನಡಾಕ್ಕೆ ಆಗಮಿಸುತ್ತಿರುವುದರಿಂದ ನಿಷೇಧ ಹಾಕಲಾಗಿದೆ ಎಂದು ಸಚಿವರು ಈಗಾಗಲೇ ಇಂಗ್ಲೆಂಡ್ ವಿಮಾನಯಾನಕ್ಕೆ ಅನುಮತಿಸದ ದೇಶಗಳ 'ಕೆಂಪು ಪಟ್ಟಿಗೆ' ಭಾರತವನ್ನು ಸೇರಿಸಿದೆ.ಜೊತೆಗೆ ಪ್ರಧಾನಿ ಬೋರಿಸ್ ಜಾನ್ಸನ್ ಭಾರತದ ಪ್ರವಾಸ ರದ್ದುಪಡಿಸಿದ್ದಾರೆ.