ದಂಗೆ –ಪ್ರತಿಭಟನೆ, ಮ್ಯಾನ್ಮಾರ್‌ನಲ್ಲಿ 230 ಕ್ಕೂ ಹೆಚ್ಚು ಜನರ ಸಾವು
ನಾಯ್ಪಿಡಾವ್, ಮಾರ್ಚ್ 20:ಮ್ಯಾನ್ಮಾರ್‌ನಲ್ಲಿ 44 ದಿನಗಳ ದಂಗೆ ಮತ್ತು ವಿರೋಧಿ ಪ್ರತಿಭಟನೆ ವೇಳೆ ಜರುಗಿದ ಹಿಂಸಾತ್ಮಕ ದಾಳಿಯಲ್ಲಿ ಮ್ಯಾನ್ಮಾರ್‌ನಲ್ಲಿ ಒಟ್ಟು 235 ಜನರು ಸಾವನ್ನಪ್ಪಿದ್ದಾರೆ ಎಂದು ಮ್ಯಾನ್ಮಾರ್‌ನ ನಾಗರಿಕ ಹಕ್ಕುಗಳ ಸಮೂಹದ ರಾಜಕೀಯ ಕೈದಿಗಳ ಸಹಾಯ ಸಂಘ ತಿಳಿಸಿದೆ. ಗುರುವಾರದ ವೇಳೆಗೆ, ಸಾವಿನ ಸಂಖ್ಯೆ 224 ಕ್ಕೆ ಏರಿಕೆಯಾಗಿಯಾಗಿದ್ದರೂ ನಿಜವಾದ ಸಾವು ನೋವಿನ ಸಂಖ್ಯೆಮತ್ತಷ್ಠು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಫೆಬ್ರವರಿ 1 ರಿಂದ ಇಲ್ಲಿಯವರೆಗೆ, ರಾಜಕೀಯ ಕೈದಿಗಳ ಸಹಾಯ ಸಂಘ (ಎಎಪಿಪಿ) ವಸಂತ ಕ್ರಾಂತಿಯ ಸಮಯದಲ್ಲಿ 235 ಜನರು ಮೃತಪಟ್ಟಿದ್ದಾರೆ ಎಂದು ಎಎಪಿಪಿ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದೆ. ಮಿಲಿಟರಿ ದಂಗೆ ಯತ್ನಕ್ಕೆ ಸಂಬಂಧಿಸಿದಂತೆ 2,330 ಜನರನ್ನು ಬಂಧಿಸಲಾಗಿದೆ, ಆರೋಪಿಸಲಾಗಿದೆ ಅಥವಾ ಶಿಕ್ಷೆ ವಿಧಿಸಲಾಗಿದೆ ಎಂದು ಹಕ್ಕುಗಳ ಗುಂಪು ಸೇರಿಸಲಾಗಿದೆ.