ಲಂಡನ್‌ನಲ್ಲಿ ಲಾಕ್‌ಡೌನ್ ವಿರೋಧಿ ಪ್ರತಿಭಟನೆ: 30 ಜನರ ಬಂಧನ
ಲಂಡನ್, ಮಾರ್ಚ್ 21:ಲಂಡನ್‌ನಲ್ಲಿ ಶನಿವಾರ ನಡೆದ ಲಾಕ್‌ಡೌನ್ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕನಿಷ್ಠ 33 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋವಿಡ್ ನಿಯಮಾವಳಿಗಳ ಪ್ರಕಾರ, ಪ್ರತಿಭಟನೆ ಮಾಡುವುದು ಮನೆಯಿಂದ ಹೊರಹೋಗಲು ಸಮಂಜಸ ಮತ್ತು ಕಾನೂನು ಕ್ರಮವಲ್ಲವಾಗಿದ್ದರೂ , ಕೋವಿಡ್ ನಿಯಮ ಮೀರಿ ಜನರು ಹೈಡ್ ಪಾರ್ಕ್‌ನಲ್ಲಿ ಜಮಾಯಿಸಿ ಕೇಂದ್ರ ಬೀದಿಗಳಲ್ಲಿ ವೈಟ್‌ಹಾಲ್ ಮತ್ತು ಸಂಸತ್ತಿನ ಬೀದಿಯಲ್ಲಿ ಮೆರವಣಿಗೆ ನಡೆಸಿದರು.ಕೋವಿಡ್ ನಿಯಮ ಮುರಿದ ಕಾರಣಕ್ಕಾಗಿ 33 ಜನರನ್ನು ಪೋಲಿಸರು ಬಂಧಿಸಿದ್ದಾರೆ. ಸಂಸತ್ತಿನ 60 ಕ್ಕೂ ಹೆಚ್ಚು ಸದಸ್ಯರು ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರಿಗೆ ಪತ್ರ ಬರೆದು ಪ್ರತಿಭಟನೆಗಳ ಮೇಲಿನ ಸಾಂಕ್ರಾಮಿಕ ಸಂಬಂಧಿತ ನಿಷೇಧವನ್ನು ತೆಗೆದುಹಾಕುವಂತೆ ಆಗ್ರಹ ಪಡಿಸಿದರು. ಕಳದೆ 13 ರಂದು ಸಾರಾ ಎವೆರಾರ್ಡ್‌ಗಾಗಿ ಸ್ನೇಹಿತನ ಮನೆಯಿಂದ ತನ್ನ ಮನೆಗೆ ತೆರಳುತ್ತಿದ್ದಾಗ ಕಾಣೆಯಾಗಿದ್ದು ಬಳಿಕ ಆಕೆಯ ಮೃತದೇಹ ಕೆಂಟ್ ಕಾಡುಪ್ರದೇಶದ ಪ್ರದೇಶದಲ್ಲಿ ಪತ್ತೆಯಾಗಿತ್ತು.