ಅಂತರರಾಷ್ಟ್ರೀಯ

ಪೂರ್ವ ಆಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ: 13 ತಾಲಿಬಾನ್ ಉಗ್ರರು ಹತ

ಪೂರ್ವ ಆಫ್ಘಾನಿಸ್ತಾನದಲ್ಲಿ ವೈಮಾನಿಕ ದಾಳಿ: 13 ತಾಲಿಬಾನ್  ಉಗ್ರರು ಹತ

ಕಾಬೂಲ್, ಜ 4 : ಆಫ್ಘಾನಿಸ್ತಾನದ ನಂಗರ್ ಹಾರ್ ಪ್ರಾಂತ್ಯದಲ್ಲಿ ರಕ್ಷಣಾ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ 13 ತಾಲಿಬಾನ್ ಉಗ್ರರು ಹತರಾಗಿದ್ದಾರೆ ಎಂದು ಪ್ರಾಂತೀಯ ಮಾಧ್ಯಮ ಕಚೇರಿ ಸೋಮವಾರ ತಿಳಿಸಿದೆ.ಹತರಾದವರಲ್ಲಿ ಇತ್ತೀಚಿಗೆ ಆಫ್ಘನ್ ಸರ್ಕಾರದೊಂದಿಗೆ ಅಮೆರಿಕ ನಡೆಸಿದ ಶಾಂತಿ ಮಾತುಕತೆ ನಂತರ ಬಿಡುಗಡೆಯಾಗಿದ್ದ ತಾಲಿಬಾನ್ ಮುಖಂಡ ಸೇರಿದ್ದಾನೆ ಎಂದು ಆಫ್ಘನ್ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯ ಧೃಡಪಡಿಸಿದೆ.ಕಳೆದ ಫೆಬ್ರವರಿಯಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕತಾರ್ ನ ದೋಹಾದಲ್ಲಿ ನಡೆದ ಸಭೆಯಲ್ಲಿ ತಾಲಿಬಾನ್ ಮತ್ತು ಆಫ್ಘನ್ ಸರ್ಕಾರ ಮಹತ್ವದ ಒಪ್ಪಂದವೊಂದನ್ನು ಮಾಡಿಕೊಂಡಿದ್ದವು.  ಇದರಂತೆ ಎರಡೂ ಕಡೆಯವರು ತಮ್ಮ ಕಡೆ ಬಂಧನದಲ್ಲಿರುವವರನ್ನು ಬಿಡಗಡೆ ಮಾಡಬೇಕೆಂಬ ಒಪ್ಪಂದ ಇದಾಗಿತ್ತು.  ಅಂದರೆ ಆಫ್ಘನ್ ಸರ್ಕಾರ 5,000 ತಾಲಿಬಾನ್ ಉಗ್ರರನ್ನು, ತಾಲಿಬಾನ್ 1,000 ಸರ್ಕಾರಿ ಸಿಬ್ಬಂದಿ ಮತ್ತು ಸೈನಿಕರನ್ನು ಬಿಡಗಡೆ ಮಾಡಬೇಕೆಂಬ ಬಗ್ಗೆ ಒಪ್ಪಂದವಾಗಿತ್ತು.

  


ಸುದ್ದಿ ಓದಿ