ಅಂತರರಾಷ್ಟ್ರೀಯ

ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನ: 11 ಯೋಧರ ಸಾವು

ಟರ್ಕಿಯಲ್ಲಿ  ಸೇನಾ ಹೆಲಿಕಾಪ್ಟರ್ ಪತನ:  11 ಯೋಧರ  ಸಾವು

ಅಂಕಾರಾ, ಮಾರ್ಚ್ 5: ಟರ್ಕಿಯಲ್ಲಿ ಸಂಭವಿಸಿದ  ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಲೆಫ್ಟಿನೆಂಟ್ ಜನರಲ್ ಸೇರಿ 11 ಯೋಧರು ಸಾವನ್ನಪ್ಪಿದ್ದಾರೆ.ಸೇನೆಯ ಲೆಫ್ಟೆನೆಂಟ್ ಜನರಲ್ ಉಸ್ಮಾನ್ ಎರ್ಬಾಸ್ ಕೂಡ ಮೃತಪಟ್ಟಿರುವುದಾಗಿ ವರದಿಯಾಗಿದೆ. ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.ಕರ್ಡಿಶ್ ಜನರು ಹೆಚ್ಚಿನ ಸಂಖ್ಯೆಯಲ್ಲಿರುವ ಬಿಟ್ಲಸ್ ಪ್ರಾಂತ್ಯದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಬಿಂಗಾಲ್ ಪ್ರದೇಶದಿಂದ ಹಾರಾಟ ಆರಂಭಿಸಿದ ನಂತರ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತ್ತು. ಹಿಮ ಸೇರಿದಂತೆ ಹಲವು ಹವಾಮಾನ ವೈಪರೀತ್ಯ ಕಾರಣದಿಂದ ಪತನ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿವೆ. ಟರ್ಕಿಯ ರಕ್ಷಣಾ ಸಚಿವ ಹುಲುಸಿ ಆಕರ್ ಮತ್ತು ಸೇನಾ ಮುಖ್ಯಸ್ಥ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. 2017ರ ಸಂದರ್ಭದಲ್ಲಿ ಇರಾಕ್ ಮತ್ತು ಟರ್ಕಿ ಗಡಿ ಪ್ರದೇಶದಲ್ಲಿ ಕೂಗರ್ ಹೆಲಿಕಾಪ್ಟರ್ ಹಾರಾಟ ಆರಂಭಿಸಿ ಸ್ವಲ್ಪ ಸಮಯದಲ್ಲೇ ಪತನಗೊಂಡಿತ್ತು. ಆ ಸಮಯದಲ್ಲಿ  13 ಮಂದಿ ಸೇನಾ ಯೋಧರು ಮೃತಪಟ್ಟಿದ್ದರು.


ಸುದ್ದಿ ಓದಿ