ಪೂರ್ವ ಮೆಕ್ಸಿಕೋದಲ್ಲಿ ಸೇನಾ ವಿಮಾನ ಪತನ : ಏಳು ಮಂದಿ ಸಾವು
ಮೆಕ್ಸಿಕೊ ನಗರ, ಫೆ 22:ಪೂರ್ವ ಮೆಕ್ಸಿಕೋ ರಾಜ್ಯವಾದ ವೆರಾಕ್ರಜ್‌ನಲ್ಲಿ ಸೇನಾ ವಿಮಾನ ದುರಂತಕ್ಕೀಡಾಗಿ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಯೂನಿವರ್ಸಲ್ ಪತ್ರಿಕೆ ವರದಿ ಮಾಡಿದೆ.ಎಮಿಲಿಯಾನೊ ಜಪಾಟಾ ಪುರಸಭೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ವೆರಾಕ್ರಜ್‌ನ ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.ಯೂನಿವರ್ಸಲ್ ಪತ್ರಿಕೆಯ ವರದಿಯಂತೆ ಮೆಕ್ಸಿಕೋ ವಾಯುಪಡೆಗೆ ಸೇರಿದ ಲಿಯರ್‌ಜೆಟ್ ಮಾದರಿಯ ವಿಮಾನ ದುರಂತಕ್ಕೀಡಾಗಿದೆ.ಹೆಚ್ಚಿನ ವಿವರಗಳನ್ನು ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.