ಅಂತರರಾಷ್ಟ್ರೀಯ

ಮೇಲು ಸೇತುವೆ ದುರಂತ: ಮೃತರ ಸಂಖ್ಯೆ 24 ಕ್ಕೆ ಏರಿಕೆ

ಮೇಲು ಸೇತುವೆ ದುರಂತ: ಮೃತರ   ಸಂಖ್ಯೆ  24 ಕ್ಕೆ  ಏರಿಕೆ

ಮೆಕ್ಸಿಕೊ ಸಿಟಿ, ಮೇ 5: ಮೆಕ್ಸಿಕೊದಲ್ಲಿ ಮೆಟ್ರೊ ರೈಲ್ವೆ ಮೇಲುಸೇತುವೆ ಕುಸಿದ ಪರಿಣಾಮ ಮೃತಪಟ್ಟವರ  ಸಂಖ್ಯೆ ಇದೀಗ 24 ಕ್ಕೆ  ಏರಿಕೆಯಾಗಿದೆ.ಈ ಘಟನೆಯಲ್ಲಿ  70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೆಟ್ರೊ ರೈಲು ಸಂಚರಿಸುವ ವೇಳೆಯೇ ಸೇತುವೆ ಕುಸಿದಿದೆ. ಹೀಗಾಗಿ ಸೇತುವೆ ಕೆಳಗೆ ಸಂಚರಿಸುತ್ತಿದ್ದ ವಾಹನಗಳ ಮೇಲೆ ಮೆಟ್ರೊ ರೈಲು ಬಿದ್ದ ಪರಿಣಾಮ ರಕ್ಷಣಾ ಕಾರ್ಯಕ್ಕೆ ತೊಂದರೆಯಾಗಿದೆ. ನಂತರ, ಕ್ರೇನ್ ಬಳಸಿ ರಕ್ಷಣಾ ಕಾರ್ಯ ಚುರುಕುಗೊಳಿಸಲಾಯಿತು ಎಂದು ಮೇಯರ್ ಕ್ಲಾಡಿಯಾ ಶೀನ್ಬಾಮ್ ತಿಳಿಸಿದ್ದಾರೆ.ಗಾಯಗೊಂಡಿರುವವರ ಪೈಕಿ 49 ಜನರನ್ನು ಆಸ್ಪತ್ರೆಗೆ ಸೇರಿಸಲಾಗಿದೆ .ಈ ಪೈಕಿ  7 ಜನರ  ಸ್ಥಿತಿ ಗಂಭೀರವಾಗಿದೆ. ಸತ್ತವರ ಪೈಕಿ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು  ನಾಗರಿಕ ಸಂರಕ್ಷಣಾ ಸಚಿವಾಲಯದ ಮುಖ್ಯಸ್ಥ ಮಿರಿಯಮ್ ಉರ್ಜುವಾ  ಹೇಳಿದರು. 


ಸುದ್ದಿ ಓದಿ