ಲಾವೋಸ್‌ನ ಸರೋವರದಲ್ಲಿ ದೋಣಿ ಮುಗುಚಿ 8 ಸಾವು
ವಿಯೆಂಟಿಯಾನ್, ಎಪ್ರಿಲ್ 5: ಉತ್ತರ ಲಾವೋಸ್‌ನ ನಾಮ್ ನ್ಗುಮ್ ಸರೋವರದಲ್ಲಿ ವಿಹಾರನಿರತ ದೋಣಿ ತಲೆಕೆಳಗಾಗಿ ಮುಗುಚಿಬಿದ್ದು 8 ಜನರು ಸಾವನ್ನಪ್ಪಿದ್ದಾರೆ ಎಂದು ಲಾವೊ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುದ್ದಿವಾಹಿನಿಯ ಪ್ರಕಾರ, ವಿಹಾರ ನೌಕೆ ಕರಾವಳಿಯಿಂದ 40 ಮೀಟರ್ (0.02 ಮೈಲಿ) ದೂರದಲ್ಲಿದ್ದಾಗ ಗಾಳಿಯ ರಭಸಕ್ಕೆ ಉರುಳಿಬಿದ್ದು ದುರಂತಕ್ಕೆ ಕಾರಣವಾಗಿದೆ. ದೋಣಿಯಲ್ಲಿ 39 ಜನರು ಪ್ರಯಾಣಿಕರು ಇದ್ದರು, ಅವರಲ್ಲಿ 31 ಜನರ ಪ್ರಾಣ ಉಳಿಸಲಾಗಿದೆ. ಮೃತಪಟ್ಟವರ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.