ಈಜಿಪ್ಟ್‌ನಲ್ಲಿ ರೈಲು ಅಪಘಾತ: 11 ಜನರ ಸಾವು
ಕೈರೋ, ಎಪ್ರಿಲ್ 19 :ಉತ್ತರ ಈಜಿಪ್ಟ್‌ನಲ್ಲಿ ರೈಲು ಹಳಿ ತಪ್ಪಿ ಒಟ್ಟು 11 ಜನರು ಸಾವನ್ನಪ್ಪಿದ್ದು, ಇತರೆ 98 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಘಟನೆ ಭಾನುವಾರ ನ ಸಂಭವಿಸಿದೆ. ಕೈರೋ ಉತ್ತರಕ್ಕೆ ಕಲ್ಯುಬಿಯಾದಲ್ಲಿ ಸಂಭವಿಸಿದ ಘಟನೆಯಲ್ಲಿ 11 ಜನರು ಮೃತಪಟ್ಟಿದ್ದಾರೆ ಎಂದು ಅಲ್ ಅರೇಬಿಯಾ ಪ್ರಸಾರ ವರದಿ ಮಾಡಿದೆ, ಮನ್ಸೌರಾ ನಗರದಿಂದ ದೇಶದ ರಾಜಧಾನಿಗೆ ಹೋಗುವಾಗ ರೈಲು ಹಳಿ ತಪ್ಪಿದೆ. ಇತ್ತೀಚಿನ ವಾರಗಳಲ್ಲಿ ಈಜಿಪ್ಟ್‌ನಲ್ಲಿ ಸಂಭವಿಸಿದ ಮೂರನೇ ರೈಲ್ವೆ ಘಟನೆ ಇದು. ಈ ವಾರದ ಆರಂಭದಲ್ಲಿ, ಉತ್ತರ ಈಜಿಪ್ಟ್ ಪ್ರಾಂತ್ಯದ ಶಾರ್ಕಿಯಾದಲ್ಲಿ ಪ್ರಯಾಣಿಕರ ರೈಲು ಹಳಿ ತಪ್ಪಿದ ಪರಿಣಾಮ ಕನಿಷ್ಠ 15 ಜನರು ಗಾಯಗೊಂಡಿದ್ದರು. ಕಳೆದ ತಿಂಗಳು, ಈಜಿಪ್ಟ್‌ನ ದಕ್ಷಿಣ ಸೊಹಾಗ್ ಪ್ರಾಂತ್ಯದಲ್ಲಿ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ , 19 ಜನರು ಸಾವನ್ನಪ್ಪಿ, ಇತರೆ 185 ಮಂದಿ ಗಾಯಗೊಂಡಿದ್ದರು.