ಹಿರಣ್ಯಕೇಶಿ ಕಾರ್ಖಾನೆ ಕಾರ್ಮಿಕರಿಗೆ ಶೇ.8.33 ಬೋನಸ್
ಕಬ್ಬು ನುರಿಸುವ ಹಂಗಾಮು ಚಾಲನೆಯಲ್ಲಿ ನಿಖಿಲ್ ಕತ್ತಿ ಹೇಳಿಕೆ
ಹುಕ್ಕೇರಿ : ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಈ ವರ್ಷದ ಬರುವ ದೀಪಾವಳಿ ಹಬ್ಬದ ಕೊಡುಗೆಯಾಗಿ ಪ್ರತಿಶತ 8.33 ಬೋನಸ್ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಕಾರ್ಖಾನೆ ಅಧ್ಯಕ್ಷರೂ ಆದ ಶಾಸಕ ನಿಖಿಲ್ ಕತ್ತಿ ಹೇಳಿದರು.
ತಾಲೂಕಿನ ಸಂಕೇಶ್ವರ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಸಕ್ತ 2023-24ನೇ ಸಾಲಿನ 63ನೇ ಕಬ್ಬು ಅರೆಯುವ ಹಂಗಾಮಿನ ಪ್ರಾರಂಭೋತ್ಸವಕ್ಕೆ ಚಾಲನೆ ಹಾಗೂ ಲಿಂ.ಅಪ್ಪಣಗೌಡಾ ಪಾಟೀಲ ಅವರ 49ನೇ ಪುಣ್ಯಸ್ಮರಣೆಯಲ್ಲಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೀಪಾವಳಿಗೆ ಕಾರ್ಖಾನೆ ಕಾರ್ಮಿಕರಿಗೆ ಬೋನಸ್ ನೀಡಲು ನಿರ್ಧರಿಸಲಾಗಿದೆ ಎಂದರು.ಪ್ರಸಕ್ತ ಹಂಗಾಮಿನಲ್ಲಿ ಸುಮಾರು 10 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದು ಕಾರ್ಖಾನೆ ಸದಸ್ಯರು ಹಾಗೂ ಕಬ್ಬು ಬೆಳೆಗಾರ ರೈತರು ಕಾರ್ಖಾನೆ ಏಳಿಗೆ ಗಮನದಲ್ಲಿಟ್ಟುಕೊಂಡು ತಾವು ಬೆಳೆದ ಕಬ್ಬನ್ನು ತಮ್ಮದೇ ಆದ ಈ ಕಾಖರ್ಾನೆಗೆ ಕಳುಹಿಸಬೇಕು. ದಿ.ಅಪ್ಪಣಗೌಡಾ ಪಾಟೀಲರು ಈ ಭಾಗದಲ್ಲಿ ಅನೇಕ ಸಂಘ-ಸಂಸ್ಥೆಗಳನ್ನು ಹುಟ್ಟು ಹಾಕಿ ರೈತರ ಆರ್ಥಿಕ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ ಎಂದು ಅವರು ಹೇಳಿದರು.ಇದಕ್ಕೂ ಮುನ್ನ ನಿಖಿಲ ಕತ್ತಿ ದಂಪತಿ ಮಹಾಲಕ್ಷೀ ಹಾಗೂ ಸರಸ್ವತಿ ಪೂಜಾ ಸಮಾರಂಭ ನೆರವೇರಿಸಿದರು. ನಿಡಸೋಸಿ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಹುನ್ನೂರ ವಿಠ್ಠರಾಯ ದೇವಸ್ಥಾನದ ಬೀರಪ್ಪಾ ಪೂಜೇರಿ ಸಾನಿಧ್ಯ ವಹಿಸಿದ್ದರು.ಉಪಾಧ್ಯಕ್ಷ ಶ್ರೀಶೈಲಪ್ಪ ಮಗದುಮ್ಮ, ನಿರ್ದೇಶಕ ಶಿವನಾಯಿಕ ನಾಯಿಕ, ಪ್ರಭುದೇವ ಪಾಟೀಲ, ಬಸವರಾಜ ಕಲ್ಲಟ್ಟಿ, ಸುರೇಶ ಬೆಲ್ಲದ, ಬಸವರಾಜ ಮರಡಿ, ಸುರೇಂದ್ರ ದೊಡ್ಡಲಿಂಗನವರ, ಘಟಪ್ರಭಾ ಜೆ.ಜಿ.ಕೋ ಆಸ್ಪತ್ರೆ ಅಧ್ಯಕ್ಷ ಅಪ್ಪಯ್ಯಪ್ಪಾ ಬಡಕುಂದ್ರಿ, ಸಂಗಮ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಗ್ರಾಮೀಣ ವಿದ್ಯುತ್ ಸಂಘದ ಅಧ್ಯಕ್ಷ ಕಲಗೌಡಾ ಪಾಟೀಲ, ಮುಖಂಡರಾದ ಅಶೋಕ ಚಂದಪ್ಪಗೋಳ, ಸತ್ಯಪ್ಪ ನಾಯಿಕ, ರಾಚಯ್ಯ ಹಿರೇಮಠ, ಗುರು ಕುಲಕರ್ಣಿ, ಗಜಾನನ ಕ್ವಳ್ಳಿ, ಶ್ರೀಕಾಂತ ಹತನೂರೆ, ವಿಜಯ ಶೆರೇಕರ, ಸುನೀಲ ಪರ್ವತರಾವ, ರಾಜು ಮುನ್ನೋಳಿ, ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕ ಸಾತಪ್ಪಾ ಕರ್ಕಿನಾಯಿಕ, ಮಾಜಿ ಸಮನ್ವಯ ಅಧಿಕಾರಿ ಜಯಸಿಂಗ ಸನದಿ ಮತ್ತಿತರರು ಉಪಸ್ಥಿತರಿದ್ದರು.ನಿರ್ದೇಶಕ ಅಶೋಕ ಪಟ್ಟಣಶೆಟ್ಟಿ ಸ್ವಾಗತಿಸಿದರು. ಕಾರ್ಯಾಲಯ ಅಧೀಕ್ಷಕ ಸುಭಾಷ ನಾಶಿಪುಡಿ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಬಾಬಾಸಾಹೇಬ ಅರಬೋಳೆ ವಂದಿಸಿದರು.