ಸಂತ ಶ್ರೇಷ್ಠ ಕನಕದಾಸರ 538ನೇ ಜಯಂತಿ ಆಚರಣೆ
ಹುಕ್ಕೇರಿ 10: ತಾಲೂಕಿನ ಸಂಕೇಶ್ವರ ಪಟ್ಟಣದ ಹಾಲುಮತ ಕುರುಬರು ಹಾಗೂ ಮುಖಂಡರು ಗಣ್ಯರಿಂದ ಸಂತ ಭಕ್ತ ಕನಕದಾಸರ ಭಾವಚಿತ್ರಕ್ಕೆ ಮಾಲಾರೆ್ಣಯನ್ನು ಮಾಡುವ ಮೂಲಕ ಪೂಜೆಯನ್ನು ನೆರವೇರಿಸಿದರು. ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಕನಕದಾಸರ ಜೀವನ ಚರಿತ್ರೆ, ತಿಮ್ಮಪ್ಪ ನಾಯಕ,ದಾಸ ಶ್ರೇಷ್ಠ ಕನಕದಾಸನಾಗಿ ಬದಲಾದ ರೀತಿ, ಸಮಾಜದಲ್ಲಿ ಜಾತಿ ಪದ್ದತಿ ಮನೆ ಮಾಡಿದ ಕಾಲದಲ್ಲಿ ಸಮಾನತೆಯನ್ನುತರಲು ಪ್ರಯತ್ನಿಸಿದ ಸಂದರ್ಭ, ಕನಕ ದಾಸರ ಅಭೂತಪೂರ್ವ ಭಕ್ತಿಯ ಪವಾಡಗಳನ್ನು ಸಾರಿದ ಮಹಾನ್ ವ್ಯಕ್ತಿಗಳಾಗಿ ಹೊರಹೊಮ್ಮಿದರು ಅಭಿನವ ಮಂಜುನಾಥ ಮಹಾಸ್ವಾಮಿಗಳು ಹಾಗೂ ಮ.ನಿ.ಪ್ರ.ಸ್ವ. ಶಿವ ಬಸವ ಮಹಾಸ್ವಾಮಿಗಳು ಸಂತ ಶ್ರೇಷ್ಠ ಭಕ್ತ ಕನಕದಾಸರ 538ನೇ ಜಯಂತಿ ಆಚರಣೆ ತತ್ವ ಆದರ್ಶ ಪಾಲಿಸಬೇಕು ಎಂದು ಆಶೀರ್ವಚನ ನೀಡಿದರು. ಅತಿಥಿ ಉಪನ್ಯಾಸಕರು ಡಾಕ್ಟರ್ ಎಮ್ ಎಸ್ ಖರಾಡಿ ಕನ್ನಡ ಅಧ್ಯಾಪಕರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹುಕ್ಕೇರಿ ಭಕ್ತ ಕನಕದಾಸರ ತತ್ವ ಆದರ್ಶಗಳು ಸಹ ವಿಸ್ತಾರವಾಗಿ ಹೇಳಿದರು. ಈ ಸಂದರ್ಭದಲ್ಲಿ ಷಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಿರೇಮಠ ಹುಕ್ಕೇರಿ ಮನಿಪ್ರಶ್ವ ಶಿವ ಬಸವ ಮಹಾಸ್ವಾಮಿಗಳು ವಿರಕ್ತ ಮಠ ಹುಕ್ಕೇರಿ ಸನ್ಮಾನ್ಯ ಅಭಿನವ ಮಂಜುನಾಥ್ ಮಹಾಸ್ವಾಮಿಗಳು ಇಂಚಿಗೇರಿ ಮಠ ಕ್ಯಾರ್ ಗುಡ್ಡ ಹುಕ್ಕೇರಿ ಪವನ್ ರಮೇಶ್ ಕತ್ತಿ ಉದ್ದಿಮೆದಾರರು ಡಾಕ್ಟರ್ ಜಯಪ್ರಕಾಶ್ ಕರಜಗಿ ಅಧ್ಯಕ್ಷರು ಹುಕ್ಕೇರಿ ತಾಲೂಕ ಕುರುಬರ ಸಮಾಜ ಶಂಕರ್ ರಾವ್ ಹೆಗಡೆ ನಿರ್ದೇಶಕರು ಕರ್ನಾಟಕ ಪ್ರದೇಶ ಕುರುಬರ ಸಂಘ ಶ್ರೀಮತಿ ಪ್ರಭಾವತಿ ಪಾಟೀಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುಕ್ಕೇರಿ ಸವಿತಾ ಹಲಗಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಶಿವಕುಮಾರ್ ಎಂ ಹೆಚ್ ಸಿದ್ದಪ್ಪ ಏಗಣ್ಣವರ ಹಾಲಪ್ಪ ಕುಡಬಾಳಪ್ಪ ಗೋಳ. ಭೀಮಸೇನ್ ಬಾಗಿ. ಗಜಾನನ ಕೊಳ್ಳಿ ಸಚಿನ್ ಹೆಗಡೆ ಬರಮಾ ಪೂಜಾರಿ. ಅಪ್ಪಾಸಾಹೇಬ ಸಾರಾಪೂರೆ ಇರ್ಷಾದ್ ಮುಕಾಶಿ ಸಂತೋಷ್ ಮೂಡಸಿ ಕನಕ ಸದ್ಭಾವನ ಪ್ರಶಸ್ತಿಗೆ ಬಾಜನರಾದ ಶ್ರೀಮಾರುತಿ ಹೆಗಡೆ ಪೊಲೀಸ ಅಧಿಕಾರಿ ಬಸವರಾಜ ಮಟಗಾರ್ ಶಿವಾಜಿ ಗೋಟೂರಿ ಅಶೋಕ ಡುಮ್ಮನವರ್ ಹಾಗೂ ಅನೇಕ ಗಣ್ಯ ಮಾನ್ಯರಿಗೆ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು ಹುಕ್ಕೇರಿ ತಾಲೂಕಿನ ಹಾಲುಮತ ಕುರುಬರ ಸಮಾಜ ಬಾಂಧವರು ಸಾರ್ವಜನಿಕರು ಗಣ್ಯಮಾನ್ಯರು ಮುಖಂಡರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು