ಸಾಧಿಕ್ ಅಲಿ, ತಾಹಿರ್ ಅಲಿ ಸೇರಿದಂತೆ19 ಜನ ಉಮ್ರಾ ಯಾತ್ರಿಕರಿಗೆ ಸನ್ಮಾನ
19 Umrah pilgrims including Sadiq Ali, Tahir Ali honored
ಲೋಕದರ್ಶನ ವರದಿ
ಕೊಪ್ಪಳ 01: ಇಸ್ಲಾಂ ಧರ್ಮದ ಪವಿತ್ರ ಮೆಕ್ಕಾ ಮದೀನ ಸ್ಥಳಗಳ ದರ್ಶನಕ್ಕಾಗಿ ಇದೆ ಏಪ್ರಿಲ್ 2 ರಂದು ಬೆಂಗಳೂರು ದಿಂದ ವಿಮಾನ ಮೂಲಕ ವಿದೇಶ ಪ್ರಯಾಣ ಉಮ್ರಾ ಯಾತ್ರೆ ಕೈಗೊಂಡಿರುವ ಕೊಪ್ಪಳದ ಒಂದೇ ಕುಟುಂಬದ 19 ಜನ ಸೇರಿದಂತೆ ಸಂಬಂಧಿಕರು ಒಟ್ಟು 32 ಜನ ಉಮ್ರ ಯಾತ್ರಿ ಕರಿಗೆ ಪಟೇಲ್ ಸಹೋದರರಿಂದ ನಗರದ ಹಾಲವರ್ತಿ ಗ್ರಾಮದ ಬಳಿ ಇರುವ ಪಟೇಲ್ ಫಾರ್ಮ್ ಹೌಸ್ ನಲ್ಲಿ ಸನ್ಮಾನ ಸಮಾರಂಭ ಏರಿ್ಡಸಿ ಎಲ್ಲಾ ಉಮ್ರಾ ಯಾತ್ರಿಕರಿಗೆ ಶುಭ ಕೋರಲಾಯಿತು, ಕೊಪ್ಪಳದ ಹಿರಿಯ ಪತ್ರಕರ್ತ ಸಾಧಿಕ್ ಅಲಿ ಮತ್ತು ಅವರ ಪತ್ನಿ ಅಜೀಮಾ ಬೇಗಂ ಅವರ ಸಹೋದರ ಮೈಸೂರಿನ ತಾಹಿರ್ ಅಲಿ ಅವರ ಪತ್ನಿ ಯಾಸ್ಮಿನ್ ಬೇಗಂ, ಇತರ ಸಹೋದರರಾದ ಮುತಾಹೇರ್ ಅಲಿ, ಲಿಯಾಖಕತ್ ಬೇಗಮ್, ಸಜ್ಜಾದ ಅಲಿ, ರೇಷ್ಮಾ ನಾಜ್, ಸರಪರಾಜ್ ಅಲಿ ಮಲ್ಲಿಕಾ ಬೇಗಮ್, ವಿಚಾರತ್ ಅಲಿ, ಅಸ್ಮಾಬೇಗಠ, ಅಲ್ಲದೆ ಹಿರಿಯರಾದ ಹುಬ್ಬಳ್ಳಿಯ ಶೇಕ್ ಮುಸ್ತಫಾ ಕೊಪ್ಪಳ, ಸಾಬೀರಾ ಬೇಗಮ್ ಕೊಪ್ಪಳ, ಮೈಸೂರಿನ ಸರ್ದಾರ್ ಬೇಗಮ್ ಜಾಗಿರ್ದಾರ್, ಕೊಪ್ಪಳದ ನೂರ್ ಜಹಾ ಬೇಗಮ್ ಅತ್ತಾರ್, ಸೈಯದ್ ರಫೀಕ್ ಹುಸೇನ್ ಪೀರಾ, ಫರಹತ್ ಜಹಾನ್ ಪೀರಾ , ಯುವಕರಾದ ಮುಜಮಿಲ್ ಅಲಿ, ಸೈಯದ್ ಜಿಶಾನ್ ಪೀರಾ ಮತ್ತು ಅರ್ಹಾನ್ ಅಲಿ ರವರುಗಳಿಗೆ ಸನ್ಮಾನಿಸಿ ಶುಭ ಕೋರಲಾಯಿತು,
ಕಾರ್ಯಕ್ರಮ ಆಯೋಜಿಸಿದ ಪಟೇಲ್ ಕುಟುಂಬದ ಪರವಾಗಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ನಗರಸಭೆಯ ಮಾಜಿ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಉಮ್ರಾ ಯಾತ್ರೆ ಯಶಸ್ವಿಯಾಗಲಿ ಪವಿತ್ರ ಸ್ಥಳ ಗಳ ದರ್ಶನ ಮಾಡುವ ಸಂದರ್ಭದಲ್ಲಿ ನಮ್ಮ ಕೊಪ್ಪಳ ಜಿಲ್ಲೆ ನಮ್ಮ ನಾಡು ಮತ್ತು ನಮ್ಮ ದೇಶದ ಬಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಿ ಸರ್ವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಶುಭ ಕೋರಿದರು, ಪಟೇಲ್ ಕುಟುಂಬದ ಮುಖ್ಯಸ್ಥ ಹಾಗೂ ಪ್ರಥಮ ದರ್ಜೆಯ ಗುತ್ತಿಗೆದಾರ ಹಾಜಿ ಅಫ್ಜಲ್ ಪಟೇಲ್ , ವೆಲ್ ಫೇರ್ ಪಾರ್ಟಿಯ ರಾಜ್ಯ ಮುಖಂಡ ಆದಿಲ್ ಪಟೇಲ್ , ಮಹಿಳಾ ಮುಖಂಡರಾದ ಸಬಿಹಾ ಪಟೇಲ್ ಯುವ ನಾಯಕ ಖಲೀಲ್ ಪಟೇಲ್ ಹಾಫೀಸ್ ಮೌಲಾನಾ ಆರಿಫ್ ಪಟೇಲ್ ಉಮರಿ, ಸೇರಿದಂತೆ ಅನೇಕರು ಪಾಲ್ಗೊಂಡಿದ್ದು, ಮೌಲಾನ ಮಹಮ್ಮದ್ ನಜರ್ ಉಲ್ಲಾ ಕುದುರಿ ಮತ್ತು ಹರಪನಹಳ್ಳಿಯ ಮೌಲಾನಾ ಪಟೇಲ್ ಸಾಹೇಬರು ಪಾಲ್ಗೊಂಡು ಆಶೀರ್ವಚನ ನೀಡಿದರು ಅಲ್ಲದೆ ಉಮ್ರಾ ಯಾತ್ರೆಯ ಅರ್ಕನ್ ನೀತಿ ನಿಯಮಗಳ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಿದರು ಅಲ್ಲದೆ ಸನ್ಮಾನ ಸ್ವೀಕರಿಸಿದ ಬಳಿಕ ಉಮ್ರಾ ಯಾತ್ರೆಯ ನೇತೃತ್ವ ವಹಿಸಿದ ಮೈಸೂರಿನ ತಾಹಿರ ಅಲಿ ಅವರು ಮಾತನಾಡಿ ಕಾರ್ಯಕ್ರಮ ಆಯೋಜಿಸಿದ ಪಟೇಲ್ ಕುಟುಂಬದವರಿಗೆ ಅಭಿನಂದಿಸಿದರು.
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ 