ಮೂಡಲಗಿ

,..,.ಪೆಟ್ರೋಲ್, ಡಿಸೈಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

,..,.ಪೆಟ್ರೋಲ್, ಡಿಸೈಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

ಲೋಕದರ್ಶನ ವರದಿ 


ಮೂಡಲಗಿ 31: ಪೆಟ್ರೋಲ್, ಡಿಸೈಲ್ ಬೆಲೆ ಏರಿಕೆ ಖಂಡಿಸಿ ಬೆಳಗಾವಿ ಜಿಲ್ಲಾ ಕಿಸಾನ ಕಾಂಗ್ರೆಸ ವತಿಯಿಂದ ಜಿಲ್ಲಾ ಕಿಸಾನ ಕಾಂಗ್ರೆಸ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಅವರ ನೇತೃತ್ವದಲ್ಲಿ ಮೂಡಲಗಿ ತಾಲೂಕಿನ ಅವರಾದಿ ಗ್ರಾಮದಲ್ಲಿ ಉಟಗಿ ಅವರ ಪೆಟ್ರೋಲ್ ಪಂಪದಲ್ಲಿ ಪ್ರತಿಭಟನೆ ನಡೆಸಿದರು.  

ಜಿಲ್ಲಾ ಕಿಸಾನ್ ಕಾಂಗ್ರೆಸ ಅಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ ಮಾತನಾಡಿ, ಪಂಚರಾಜ್ಯಗಳ ಚುನಾವಣೆಗೋಸ್ಕರ ಬೆಲೆ ಕಡಿಮೆ ಮಾಡಿ ಮತ್ತೆ ಪೆಟ್ರೋಲ್, ಡಿಸೈಲ್ ಮತ್ತು ಅನಿಲ ಬೆಲೆಯನ್ನು ದಿನದಂದ ದಿನಕ್ಕೆ ಏರಿಕೆ ಮಾಡುತ್ತಿರುವುದು ಸರಿಲ್ಲ ಎಂದ ಅವರು ಕೇಂದ್ರ ಸರಕಾರ ವಿರುದ್ಧ ಹರಿಆಯ್ದ ಬೆಲೆ ಕಡಿಮೆ ಮಾಡದಿದಲ್ಲಿ ದೇಶಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.                                

   ಕಾರ್ಯಧ್ಯಕ್ಷ ಭೀಮಶಿ ಕಾರದಗಿ ಮಾತನಾಡಿ, ರೈತರು, ಕಾರ್ಮಿಕರು, ಬಡವರು ಮತ್ತು ದುಡಿಯುವ ವರ್ಗವನ್ನು ಲೆಕ್ಕಿಸದೆ ಬೆಲೆಯನ್ನು ಹೆಚ್ಚಿಸಿ ಬದುಕಲಿಕ್ಕೆ ನಿರ್ಮಾಣ ಮಾಡಿದ್ದಾರೆ ಎಂದು ಆರೋಪಿಸಿದ ಅವರು ತಕ್ಷಣ ಬೆಲೆ ಕಡಿಮೆ ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿ ಕೊಡಬೇಕೆಂದು ಆಗ್ರಹಿಸಿದರು. 

  ಪ್ರತಿಭಟನೆಯಲ್ಲಿ ಜಿಲ್ಲಾ ಕಿಸಾನ್ ಉಪಾಧ್ಯಕ್ಷ ಕುಮಾರ ಕಾತರಕಿ, ಕಾರ್ಯಧ್ಯಕ್ಷ ರಮೇಶ ಮೋಕಾಶಿ, ಕೌಜಲಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಗಮಣ್ಣ ಕಳಸಣ್ಣವರ, ಕೌಜಲಗಿ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ  ಮಂಜು ಮಸಗುಪ್ಪಿ ಕೌಜಲಗಿ ಬ್ಲಾಕ ಕಿಸಾನ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ ಕರಿಗಾರ, ಕಾಂಗ್ರೆಸ್ ಮುಖಂಡರಾದ ಗುರ​‍್ಪಸಾಹುಕಾರ ಊಟಗಿ, ಸಂಜು ಬಾಗಿ ಹಾಗೂ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮತ್ತಿತರರು ಇದ್ದರು 


ಸುದ್ದಿ ಓದಿ