ಯಮಕನಮರಡಿ: "ವರುಣನ ಕೃಪೆಯ ಮಧ್ಯ ಸಂಚಾರಿ ಪ್ರವಚನ ಮುಕ್ತಾಯ"
ಲೋಕದರ್ಶನ ವರದಿ
ಯಮಕನಮರಡಿ 25: ಜನ್ಮವೆತ್ತ ತಂದೆ-ತಾಯಿಗಳನ್ನು ಪೂಜಿಸಿ ನಿಜದೇವರಿಗೆ ನಮಿಸಿದಾಗ ಮಾತ್ರ ಜನ್ಮ ಪಾನವಾಗಲು ಸಾಧ್ಯ ಎಂದು ಚಿಕ್ಕೋಡಿಯ ಸಂಪಾದನಾ ಸ್ವಾಮಿಗಳು ಹೇಳಿದರು,
ಅವರು ದಿ,23 ರಂದು ಸ್ಥಳಿಯ ವೀರೇಶ ಪೌಂಡೇಶನ ರವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸಂಚಾರಿ ಪ್ರವಚನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತ ಮಳೆರಾಯನು ಇಂದು ಮುಕ್ತಯ ಸಮಾರಂಭಕ್ಕೆ ಆಗಮಿಸಿ ಶೋಭೆ ತರುವುದರೊಂದಿಗೆ ಕೃಷಿಕರಲ್ಲಿ ಸಂತೋಷ ಮೂಡಿಸಿದ್ದಾನೆ ಅಚಲ ಭಕ್ತಿ ವರುಣನ ಕೃಪೆಗೆ ಸಾಕ್ಷಿಯಾದಂತಿದೆ, ವೃದ್ದಾಶ್ರಮದಲ್ಲಿಂದು ತಂದೆ-ತಾಯಿಗಳನ್ನು ಇಡುವ ಪರಿಪಾಟ ನಿಲ್ಲಬೇಕಗಿದೆ ಎಂದರು, ದಿವ್ಯ ಸಾನಿಧ್ಯವನ್ನು ಹುಣಸಿಕೋಳ್ಳಮಠದ ಶ್ರೀರಾಚೋಟಿ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಈರಣ್ಣಾ ತುಬಚಿಯವರ ಜನಹಿತ ಕಾರ್ಯ,ಅನ್ನದಾನದ ಶ್ಲಾಘನೀಯ ಎಂದರು,
ಪ್ರಾರಂಭದಲ್ಲಿ ಮಳೆಗಾಗಿ ಪ್ರವಚನ ಎಂಬ ವಾಣಿಯನ್ನು ಚಿಕ್ಕೊಡಿ ಶ್ರೀಗಳ ವಾಕ್ಯದಂತೆ ಮುಕ್ತಾಯ ಸಮಾರಂಭಕ್ಕೆ ವರುಣನ ಆಗಮನದಿಂದಲೇ ಕಾರ್ಯಕ್ರಮ ಪ್ರಾರಂಭವಾಯ್ತು ಕಾರ್ಯಕ್ರಮಕ್ಕೆ ಮಳೆ ಬಂದರು ಕೂಡಾ ಭಕ್ತರು ಪ್ರವಚನ ಆಲಿಸಿ ಪಾವನರಾದರು.
ಇದೇ ಸಂದರ್ಭದಲ್ಲಿ 5 ದಿನಗಳ ಕಾಲ ಸಂಗೀತ ಸೇವೆ ಸಲ್ಲಿಸಿದ ಸಂಗೀತ ಕಲಾ ವಿದರನ್ನು ವೀರೇಶ ಪೌಂಢೇಶನ ನಿಂದ ಸತ್ಕರಿಸಲಾಯಿತು, ವೇದಿಕೆಯಲ್ಲಿ ಸುಮಾರು 300 ಭಕ್ತಾಧಿಗಳಿಗೆ ರುದ್ರಾಕ್ಷಿ ಧಾರಣ ಕಾರ್ಯಕ್ರಮ ನಡೆಯಿತು, ನಂತರ ಭಕ್ತಾಧಿಗಳಿಗೆ ಮಹಾ ಪ್ರಸಾದ ಆಯೋಜಿಸಲಾಗಿತ್ತು,
ಪ್ರಾರಂಭದಲ್ಲಿ ಶಾಲಾ ಮಕ್ಕಳಿಂದ ವಚನ ಗಾಯನ ಜರುಗಿತು, ಕಾರ್ಯಕ್ರಮಕ್ಕೆ ಅಪ್ಪಾಸಾಹೇಬ ಬಡಿಗೇರ ಸ್ವಾಗತಿಸಿದರು, ಕಾರ್ಯಕ್ರಮವನ್ನು ಎ,ಬಿ,ನಾಯಿಕ, ನಿರೂಪಿಸಿ ಕೊನೆಯಲ್ಲಿ ಜಿ,ಕೆ,ಚಪನಿ ವಂದಿಸಿದರು.