ಹುಕ್ಕೇರಿ

ಕಸ ನಿರ್ವಹಣೆ ಮಾಡುವ ಶ್ರಮಿಕ ಮಹಿಳೆಯರಿಗೆ ”ಮಹಿಳಾ ರತ್ನ” ಪ್ರಶಸ್ತಿ ಪ್ರಧಾನ

ಕಸ ನಿರ್ವಹಣೆ ಮಾಡುವ ಶ್ರಮಿಕ ಮಹಿಳೆಯರಿಗೆ ”ಮಹಿಳಾ ರತ್ನ” ಪ್ರಶಸ್ತಿ ಪ್ರಧಾನ

ಕಸ ನಿರ್ವಹಣೆ ಮಾಡುವ ಶ್ರಮಿಕ ಮಹಿಳೆಯರಿಗೆ ”ಮಹಿಳಾ ರತ್ನ” ಪ್ರಶಸ್ತಿ ಪ್ರಧಾನ  

ಹುಕ್ಕೇರಿ 13 : ಗ್ರಾಮ ಮಟ್ಟದಲ್ಲಿ ಕಸವನ್ನು ಸಂಗ್ರಹಿಸಿ ಬೇರಿ​‍್ಡಸಿ ಆರೋಗ್ಯಕರ ಜನವಸತಿಗಾಗಿ ಶ್ರಮಿಸುತ್ತಿರುವ ಸ್ವಸಹಾಯ ಸಂಘಗಳ ಶ್ರಮಿಕ ಮಹಿಳೆಯರಿಗಾಗಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಶಕ್ತಿ ಸದನ ಪುನರ್ವಸತಿ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಬೋರಗಲ್ ಗ್ರಾಮ ಪಂಚಾಯತಿಯಲ್ಲಿ ಸ್ವಸಹಾಯ ಸಂಘಗಳ ಮೂಲಕ ಘನ ತ್ಯಾಜ್ಯ ವಿಲೆವಾರಿಯಲ್ಲಿ ತೊಡಗಿರುವ ಶ್ರೀಮತಿ ಶಶಿಕಲಾ ರೋಗಿ, ವಾಹನ ಚಾಲಕಿ ಶ್ರೀಮತಿ ಸವಿತಾ ಕಾಂಬಳೆ ಹಾಗೂ ಜಯಶ್ರೀ ಹಾದಿಮನಿಯವರಿಗೆ ಪ್ರಶಸ್ತಿ ನೀಡಿ ಮಹಿಳಾ ಕಲ್ಯಾಣ ಸಂಸ್ಥೆಯ ಮೂಲಕ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಸಹಾಯಕ  ಪ್ರಾಧ್ಯಾಪಕಿ ಶ್ರೀಮತಿ ಜಯಶ್ರೀ ಕೆಂಗೇರಿ ಮಾತನಾಡಿ ಯಾವುದೇ ಕೆಲಸವನ್ನು ಶ್ರಧ್ಧೆಯಿಂದ ಮಾಡಬೇಕು, ಮಾಡುವ ಕೆಲಸದಲ್ಲಿ ತಾರತಮ್ಯ ಸಲ್ಲದು. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕುಟುಂಬ ನಿರ್ವಹಣೆ ಜೊತೆಗೆ ಸಮಾಜದ ಅಭಿವೃದ್ಧಿಗೂ ಕೈ ಜೋಡಿಸುತ್ತಿರುವದು ದೇಶದ ಅಭಿವೃದ್ಧಿಯ ಸಂಕೇತ ಎಂದರು. ಇನ್ನೋರ್ವ ಅತಿಥಿ ಶ್ರೀಮತಿ ಸುರೇಖಾ ಪಾಟೀಲ ಮಾತನಾಡುತ್ತಾ ಉನ್ನತ ಹುದ್ದೆಯಲ್ಲಿರುವ ಅನೇಕರಿಗೆ ಸಮ್ಮಾನ ಪುರಸ್ಕಾರವನ್ನು ಕೊಡುವುದು ಸರ್ವೇಸಾಮಾನ್ಯ ಆದರೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದುಡಿಯುತ್ತಿರುವ ಕಸ ವಿಲೇವಾರಿ ಮಾಡುತ್ತಿರುವ ಶ್ರಮಿಕ ಮಹಿಳೆಯರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡುತ್ತಿರುವ ಮಹಿಳಾ ಸಂಸ್ಥೆಯ ಕಾರ್ಯ ಪ್ರಶಂಸನಿಯ. ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ಎಮ್‌.ಎಮ್‌.ಗಡಗಲಿ,   ದ್ರಾಕ್ಷಾಯಿಣಿ ಮಠಪತಿ ಡಾ.ಪ್ರಕಾಶ ಹೊಸಮನಿ ಉಪಸ್ಥಿತರಿದ್ದರು. 


ಸುದ್ದಿ ಓದಿ