‘ವೈಜ್ಞಾನಿಕ ಯುಗದಲ್ಲಿ ನ್ಯಾನೋ ವಿಜ್ಞಾನದ ಸಂಶೋಧನೆ ಮಹತ್ವವಾದದ್ದು’
'Nanoscience research is important in the scientific age'
ಬೆಳಗಾವಿ 11: ನ್ಯಾನೋ ವಿಜ್ಞಾನವು ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನದ ಅತ್ಯಂತ ಪರಿವರ್ತನಾ ಕ್ಷೇತ್ರದಲ್ಲಿ ಒಂದಾಗಿದೆ. ಜೊತೆಗೆ ವಿಜ್ಞಾನದ ಬಹುಶಾಖಿಯ ಸವಾಲುಗಳಿಗೆ ಪರಿಹಾರವನ್ನು ನೀಡುತ್ತಾ ಬಂದಿದೆ. ಆದ್ದರಿಂದ ವಿಜ್ಞಾನದ ಯುಗದಲ್ಲಿ ನ್ಯಾನೋ ವಿಜ್ಞಾನದ ಸಂಶೋಧನೆ ಬಹುಮಹತ್ವವಾದದು ಎಂದು ಬೆಂಗಳೂರಿನ ಸೆಂಟರ್ ಫಾರ್ ನ್ಯಾನೋ ಅಂಡ್ ಸಾಫ್ಟ್ ಮ್ಯಾಟರ್ ಸೈನ್ ನ ವಿಜ್ಞಾನಿ ಡಾ.ಅಶುತೋಷ್ ಕುಮಾರ್ ಸಿಂಗ್ ಅವರು ಹೇಳಿದರು.ನಗರದ ಕೆ ಎಲ್ ಇ ಸಂಸ್ಥೆಯ ಜಿ.ಎಚ್ ಕಾಲೇಜಿನ ಭೌತಶಾಸ್ತ್ರ ವಿಭಾಗ ಆಯೋಜಿಸಿದ ರಾಷ್ಟ್ರೀಯ ವಿಚಾರ ಸಂಕೀರ್ಣವನ್ನು ಉದ್ದೇಶಿಸಿ ಅವರು ಮಾತನಾಡಿದರು. ನ್ಯಾನೋಕಣಗಳ ಮೂಲಭೂತ ಅಂಶಗಳು, ಅವುಗಳ ನಿರ್ಮಾಣ ವಿಧಾನಗಳು ಮತ್ತು ದಿನನಿತ್ಯದ ಜೀವನದಲ್ಲಿ ಅವುಗಳ ಉಪಯೋಗಗಳ ಕುರಿತು ವಿವರಿಸಿದರು. ನೀರಿನ ಶುದ್ಧೀಕರಣ ಮತ್ತು ಮಾಲಿನ್ಯ ನಿಯಂತ್ರಣ ಕ್ಷೇತ್ರದಲ್ಲಿ ನ್ಯಾನೋ ವಸ್ತುಗಳ ಬಳಕೆ ಅತ್ಯಂತ ಪರಿಣಾಮಕಾರಿ ಎಂದು ತಿಳಿಸಿದರು. ಜೊತೆಗೆ, ನ್ಯಾನೋ ವಸ್ತುಗಳ ಸಂಶ್ಲೇಷಣಾ ವಿಧಾನಗಳು, ಅವುಗಳ ರಚನಾ ವೈಶಿಷ್ಟ್ಯಗಳು ಮತ್ತು ವೈಜ್ಞಾನಿಕ ಉಪಯೋಗಗಳ ಕುರಿತು ಸವಿಸ್ತಾರವಾಗಿ ವಿಶ್ಲೇಷಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿಯ ಕೆ ಎಲ್ ಇ ಸಂಸ್ಥೆಯ ಸಂಸ್ಥೆಯ ನಿರ್ದೇಶಕರಾದ ಎಂ. ಸಿ ಕೊಳ್ಳಿಯವರು ವಹಿಸಿದ್ದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲವ್ಯಕ್ತಿಗಳಾಗಿ ಡಾ. ಕೊಟ್ರೇಶ್ ಎಂ.ಜಿ ಮತ್ತು ಡಾ. ಹನುಮಂತಗೌಡ ಬಿ. ಆಗಮಿಸಿದ್ದರು. ಕಾಲೇಜಿನ ಐಕ್ಯುಎಸಿ ಸಂಯೋಜಕರಾದ ರೂಪ ಕೋರೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ. ಎಂ ಹೊಳ್ಳಿಯವರ ಈ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಉಮಾದೇವಿ ನೇರ್ಲೆ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿದರು. ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ರಾಜೇಶ್ವರಿ ಟಿ. ವಂದಿಸಿದರು.
ಈ ವಿಚಾರ ಸಂಕಿರಣದಲ್ಲಿ ನ್ಯಾನೋ ವಿಜ್ಞಾನಕ್ಕೆ ಸಂಬಂಧಿಸಿದ 53 5ಮೌಖಿಕ ಪ್ರಸ್ತುತಿ ಮತ್ತು 45 ಪೋಸ್ಟರ್ ಪ್ರಸ್ತುತಿ ಸ್ಪರ್ಧೆಗಳು ನಡೆದವು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 