‘ಅಲ್ಪಸಂಖ್ಯಾತರ ಕಡೆಗಣನೆ, ಕಾಂಗ್ರೆಸ್ಸನ್ನು ಸೋಲಿಸಿ: ಗೌಡಪ್ಪ ಬಡಿಗೇರ
'Minority neglect, defeat Congress: Gowdappa Badigera'
ಲೋಕದರ್ಶನ ವರದಿ
ವಿಜಯಪುರ 31: ದಲಿತರನ್ನು, ಹಿಂದುಳಿದ ವರ್ಗಗಳನ್ನು, ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಮತ ಬ್ಯಾಂಕ್ ಮಾಡಿಕೊಂಡಿದೆಯೇ ಹೊರತು ಅವರಿಗಾಗಿ ಶ್ರಮಿಸುತ್ತಿಲ್ಲ ಎಂದು ಅಹಿಂದ ಮುಖಂಡ ಗೌಡಪ್ಪ ಬಡಿಗೇರ ಹೇಳಿದರು.
ಶಾಮನೂರು ಶಿವಶಂಕರ್ಪರಿಂದ ತೆರವಾದ ದಾವಣಗೆರೆ ಕ್ಷೇತ್ರಕ್ಕೆ, ಕ್ಷೇತ್ರದ ಬಹುಸಂಖ್ಯಾತರಾದ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಈ ಹಿಂದೆ ಬೇಡಿಕೆ ಇದ್ದಾಗ ಮುಂದಿನ ಬಾರಿ ಅವಕಾಶ ನೀಡಲಾಗುವುದು ಎಂದು ಹೇಳಿದಾಗ ಅಹಿಂದ ವರ್ಗಗಳೆಲ್ಲ ಸೇರಿ ಶಾಮನೂರ ಶಿವಶಂಕರ್ಪ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದರು.
ಈಗ ಬೇಡಿಕೆ ನಿರಾಕರಿಸಿರುವುದು ಕಾಂಗ್ರೆಸ್ ಯಾವಾಗಲೂ ಕಾರ್ಯಕರ್ತರ ಪಕ್ಷಯಾಗಿರದೆ, ಪಿತ್ರಾರ್ಜಿತ ಆಸ್ತಿಯಾಗಿದೆ. ಕಾಂಗ್ರೆಸ್ ಹೇಳುವುದು ಪ್ರಜಾಪ್ರಭುತ್ವ, ಆದರೆ, ವಂಶಪಾರಂಪರ್ಯ ಆಡಳಿತ ಮುಂದುವರಿಸಿಕೊಂಡು ಬಂದಿದೆ ಎಂದರು.
ಇತ್ತೀಚೆಗೆ, ಮೀಸಲು ಹಂಚಿಕೆಯ ವಿಷಯದಲ್ಲೂ, ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಪಾಲಿಸದೆ, ತಮ್ಮ ನಿರ್ಧಾರವನ್ನು ಸಮರ್ಕ ಅನುಷ್ಠಾನಗೊಳಿಸದೆ ದಲಿತರಲ್ಲಿ ವಿನಾಕಾರಣ ಗೊಂದಲ ಮೂಡಿಸುತ್ತಿದೆ.
ಹಾಗಾಗಿ, ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಹಿಂದರೆಲ್ಲ ಒಗ್ಗಟ್ಟಿನಿಂದ ಕಾಂಗ್ರೆಸ್ ಅನ್ನು ಸೋಲಿಸಿರಿ. ಆ ಮೂಲಕ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಪ್ರಕಟಣೆಯಲ್ಲಿ ಅವರು ಹೇಳಿದ್ದಾರೆ.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 