ಬೈಲಹೊಂಗಲ

ಮುರುಘರಾಜ ದೇಶಾಯಿ ವಸತಿ ಶಾಲೆಯಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

ಮುರುಘರಾಜ ದೇಶಾಯಿ ವಸತಿ ಶಾಲೆಯಲ್ಲಿ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮ

ಬೈಲಹೊಂಗಲ 06 :  ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್‌) ಹಾಗೂ ಮುರುಘರಾಜ ದೇಶಾಯಿ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ‘ಸ್ವಾಸ್ಥ್ಯ ಸಂಕಲ್ಪ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲ ಪಿ. ಎನ್‌. ಲಕ್ಕನಗೌಡರ್ ವಹಿಸಿದ್ದರು.  

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎಸ್‌.ಡಿ.ಎಂ.ಸಿ. ಅಧ್ಯಕ್ಷ ನಾರಾಯಣ ನಲವಡೆ ಮಾತನಾಡಿ, ಸದೃಢ ಭಾರತ ನಿರ್ಮಾಣಕ್ಕೆ ಯುವಜನತೆ ವ್ಯಸನಮುಕ್ತರಾಗುವುದು ಅತ್ಯಗತ್ಯ ಎಂದರು. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ಯುವಕರು ಸಂಕಲ್ಪ ತೊಟ್ಟು ಜಾಗೃತಿ ಮೂಡಿಸಬೇಕೆಂದು ಕರೆ ನೀಡಿದರು. ಇದೇ ವೇಳೆ ವಿದ್ಯಾರ್ಥಿಗಳಿಗೆ ವ್ಯಸನಮುಕ್ತ ಜೀವನದ ಕುರಿತು ಪ್ರತಿಜ್ಞಾ ಬೋಧನೆ ಮಾಡಲಾಯಿತು.  

ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲೂಕು ಸಂಯೋಜಕ ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಲಯದ ಮೇಲ್ವಿಚಾರಕ ಜಗದೀಶ್ ಕುಂಬಾರ, ಗ್ರಾಮ ಸೇವಾ ಪ್ರತಿನಿಧಿಗಳಾದ ಭಾರತಿ ದವಳೆ ಹಾಗೂ ರೇಣುಕಾ ಜಾವೂರು ಉಪಸ್ಥಿತರಿದ್ದರು.  ಕಾರ್ಯಕ್ರಮದಲ್ಲಿ ಬಸಪ್ಪ ಹಕ್ಕರಕಿ ಸ್ವಾಗತಿಸಿದರು. ಎಸ್‌.ಪಿ. ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿಜಯ ಮಠದ ವಂದನಾರೆ​‍್ಣ ಸಲ್ಲಿಸಿದರು. 


ಸುದ್ದಿ ಓದಿ