ಚಿಕ್ಕೋಡಿ

ಕೇರೂರ ಅಭಿವೃದ್ಧಿಗೆ 3 ವರ್ಷದಲ್ಲಿ ?54 ಕೋಟಿ ಅನುದಾನ: ಪ್ರಕಾಶ ಹುಕ್ಕೇರಿ

ಕೇರೂರ ಅಭಿವೃದ್ಧಿಗೆ 3 ವರ್ಷದಲ್ಲಿ ?54 ಕೋಟಿ ಅನುದಾನ: ಪ್ರಕಾಶ ಹುಕ್ಕೇರಿ
₹54 crore grant for Kerur's development over 3 years: Prakash Hukkeri

ಲೋಕದರ್ಶನ ವರದಿ 

ಚಿಕ್ಕೋಡಿ 21:  ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ರೂಪಿಸಲಾಗಿದ್ದು, ಕೇರೂರ ಗ್ರಾಮದ ಅಭಿವೃದ್ಧಿಗೆ ಕಳೆದ ಮೂರು ವರ್ಷಗಳಲ್ಲಿ ?54 ಕೋಟಿ ಅನುದಾನ ಒದಗಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಹೇಳಿದರು.ತಾಲೂಕಿನ ಕೇರೂರ ಗ್ರಾಮದ ಶ್ರೀ ಅಪ್ಪಯ್ಯಗೌಡ ಪಾಟೀಲ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 36.75 ಲಕ್ಷ ವೆಚ್ಚದ ನೂತನ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಚಿಕ್ಕೋಡಿ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಗೋದಾಮುಗಳ ನಿರ್ಮಾಣಕ್ಕೆ ಒಟ್ಟು 17 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ನಬಾರ್ಡ್‌ ಯೋಜನೆಯಡಿ ಶಾಸಕ ಗಣೇಶ ಹುಕ್ಕೇರಿ ಅವರು ಪಿಕೆಪಿಎಸ್ ಸಹಕಾರ ಸಂಘಗಳಿಗೆ ವಿಶೇಷ ಅನುದಾನ ಒದಗಿಸಿದ್ದಾರೆ ಎಂದರು.ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಳೆಗಳಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ರೂಪಿಸಲಾಗಿದ್ದು, ಇದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪ್ರಕಾಶ ಹುಕ್ಕೇರಿ ಹೇಳಿದರು. 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಿಡಸೋಶಿ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ವಹಿಸಿದ್ದರು. ಅವರು ಪ್ರಾಥಮಿಕ ಕೃಷಿ ಸಹಕಾರ ಸಂಘಗಳ ಮೂಲಕ ರೈತರಿಗೆ ದೊರೆಯುವ ಆರ್ಥಿಕ ಸೌಲಭ್ಯಗಳ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ದ್ರಾಕ್ಷಿರಸ ಮಂಡಳಿ ಮಾಜಿ ಅಧ್ಯಕ್ಷ ರವೀಂದ್ರ ಮಿರ್ಜೆ, ಸಹಕಾರ ಸಂಘದ ಅಧ್ಯಕ್ಷ ಬಸಗೌಡ ಪಾಟೀಲ, ಉಪಾಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ. ಕಲ್ಲಪ್ಪಾ ಅಪ್ಪಯ್ಯಾ ಕಾನಡೆ. ಮಾಯಗೌಡಾ ಮಲಗೌಡಾ ಪಾಟೀಲ. ವಿರೇಂದ್ರ ರಾಮಗೌಡಾ ಪಾಟೀಲ. ಮಲ್ಲಪ್ಪಾ ಬಾಗಪ್ಪಾ ಬಾಗಿ. ವಿಠಲ ಹೂವಪ್ಪಾ ವಾಳಕೆ.ಶ್ರೀಮತಿ ಪುಷ್ಪಾವತಿ ಈಶ್ವರ ಶಿಂಧೆ.ಶ್ರೀಮತಿ ಗೌರವ್ವಾ ಕೇದಾರಿ ಧನವಡೆ. ಶಿದ್ದಪ್ಪಾ ದುರ್ಗಪ್ಪಾ ಚುಬಚೆ. ರಾಮು ಭೀಮಪ್ಪಾ ಹಿರೇಕುಡಿ. ಅಮರ ಎನ್‌. ರೊಡ್ಡನ್ನವರ. ಸಂಘದ ಸಿಬ್ಬಂದಿಗಳಾದ ಅಪ್ಪಾಸಾಬ ಅಣ್ಣಪ್ಪಾ ಧನವಡೆ. ನಿಂಗಪ್ಪಾ ಸೀತಾರಾಮ ಕಾಂಬಳೆ. ಸತೀಶ ಮಹಾದೇವ ಧನವಡೆ. ರಾಜೇಂದ್ರ ಶಿವಪ್ಪಾ ಮಾಂಗನೂರೆ.ಮಹೇಶ ಬಾಬಾಜಿಗೌಡ ಪಾಟೀಲ. ಕು. ಸಮೃದ್ಧಿ ಬಸವರಾಜ ಪಾಟೀಲ. ಶಮೀರ ಬಾದಶಹಾ ನೇಜಕರ. ಹಾಲಪ್ಪಾ ಕೃಷ್ಣಪ್ಪಾ ಬೆಕ್ಕೇರಿ. ಪ್ರಕಾಶ ಶಂಕರ ಖಿಲಾರೆ ಮುಂತಾದವರು ಇದ್ದರು.ರವೀಂದ್ರ ಪಾಟೀಲ ಸ್ವಾಗತಿಸಿದರು. ಶಿಕ್ಷಕ ಮಹೇಶ ಮಗದುಮ್ಮ ನಿರೂಪಿಸಿದರು. 


ಸುದ್ದಿ ಓದಿ