ಮೂಡಲಗಿ

‘ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ’

‘ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಿ’

ಮೂಡಲಗಿ 12: ವಿದ್ಯಾರ್ಥಿಗಳು ವ್ಯಕ್ತಿತ್ವ ವಿಕಸನ ಸಂವಹನ ಕೌಶಲ್ಯಗಳನ್ನು ಬೆಳಸಿಕೊಳ್ಳಲು ಪ್ರಯತ್ನಿಸಬೇಕು ಇಂದಿನ ದಿನಗಳಲ್ಲಿ ಮೊಬೈಲ್ ತಾಂತ್ರಿಕ ಸಾಧನವಾಗಿ ನಮ್ಮನ್ನು ಆಕ್ರಮಿಸಿಕೊಂಡಿದ್ದೆ ಅದರ ಬಳಿಕೆಯ ಜೊತೆಗೆ ನಮ್ಮ ಪ್ರತಿಭೆಗಳು ಹೊರಜಗತ್ತಿಗೆ ಪರಿಚಯವಾಗಲು ವಿಶೇಷ ವ್ಯಕ್ತಿತ್ವದ ತತ್ವಗಳನ್ನು ಮತ್ತು ವ್ಯವಹಾರಿಕ ಕೌಶಲ್ಯಗಳನ್ನು ವಿದ್ಯಾರ್ಥಿಗಳು ಓದಿನ ಜೊತೆಗೆ ಬೆಳಸಿಕೊಳ್ಳಬೇಕು. ಕೇವಲ ನಾಲ್ಕು ಗೋಡೆಯ ಒಳಗೆ ನಮ್ಮ ಬದುಕು ಇರಬಾರದು ಅದು ಪ್ರಪಂಚಕ್ಕೆ ತೋರುವಂತಹ ಸಾಮಾಜಿಕ ಜೀವಿಯಾಗಿ ಸಾಧಕರ ಸಾಲಿನಲ್ಲಿ ನಮ್ಮ ಜೀವನ ರೂಪಗೊಳ್ಳುವಂತೆ ವಿದ್ಯಾರ್ಥಿಗಳು ಪ್ರಯತ್ನಿಸಬೇಕೆಂದು ಗೋಕಾಕದ ಜೆ.ಎಸ್‌.ಎಸ್‌. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಎಸ್‌.ಬಿ.ಹಾವನ್ನವರ ಹೇಳಿದರು. 

ಅವರು ಸ್ಥಳೀಯ ಆರ್‌ಡಿಎಸ್ ಕಲಾ, ವಾಣಿಜ್ಯ, ವಿಜ್ಞಾನ ಮತ್ತು ಸಮಾಜಕಾರ್ಯ ಪದವಿ ಮಹಾವಿದ್ಯಾಲಯದಲ್ಲಿ ಎನ್‌.ಎಸ್‌.ಎಸ್ ಘಟಕ, ಸ್ಕೌಟ್ಸ್‌ ್ಘ ಗೈಡ್ಸ್‌ ಘಟಕ, ಸಾಂಸ್ಕೃತಿಕ ಹಾಗೂ ಕ್ರೀಡೆ, ಪಠ್ಯೇತರ ಚಟುವಟಿಕೆಗಳು ಉದ್ಘಾಟನೆ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಯುವ ವಿದ್ಯಾರ್ಥಿಗಳು ತಾಯಿ-ತಂದೆಯ ನಿಜವಾದ ಪ್ರೀತಿಯನ್ನು ತಪ್ಪಾಗಿ ಭಾವಿಸಿ ತಮ್ಮ ಅಮೂಲ್ಯವಾದ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಆ ತಪ್ಪನ್ನು ಮಾಡದೇ ತಂದೆ ತಾಯಿಗಳಿಗೆ ್ಘ ಗುರುಗಳಿಗೆ ಗೌರವವನ್ನು ಕೊಟ್ಟು ಜೀವನದಲ್ಲಿ ಸಾಧಕರಾಗಿ ಉತ್ತಮ ವಾಘ್ಮೀಗಳಾಗಿ ಬೆಳೆಯುವಂತೆ ಪ್ರಯತ್ನಿಸಬೇಕಂದರು. 

ಕಾಲೇಜು ಪ್ರಾಚಾರ್ಯ ಸತೀಶ ಗೋಟೂರೆ ಮಾತನಾಡಿ ವಿದ್ಯಾರ್ಥಿಗಳು ತಮ್ಮ ಜೀವನ ರೂಪಿಸಿಕೊಳ್ಳಲು ಮಹತ್ವದ ಕನಸ್ಸುಗಳನ್ನು ಹೊಂದಿದ್ದು ಅವುಗಳನ್ನು ರೂಪಿಸಿಕೊಳ್ಳಲು ತಂದೆ ತಾಯಿಗಳು ಮತ್ತು ಗುರುಗಳು ಪ್ರಯತ್ನಿಸುತ್ತಾರೆ ಸರಿಯಾಗಿ ಸದ್ಬಳಿಕೆ ಮಾಡಿಕೊಂಡಿ ಸರಿಯಾದ ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನದ ಮಹತ್ವದ ಗುರಿಯನ್ನು ಮುಟ್ಟಲು ಸಾಧ್ಯ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಂತೋಷ ತಮ್ಮಣ್ಣಾ ಪಾರ್ಶಿ ವಹಿಸಿಕೊಂಡು ಮಾತನಾಡಿ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಪ್ರಯತ್ನ ಇರಲೇಬೇಕು ಪ್ರಯತ್ನಕ್ಕೆ ನಿರಂತರ ಅಧ್ಯಯನ ಹಾಗೂ ಹಿರಿಯರ ಮತ್ತು ಯೋಗ್ಯ ಗುರುಗಳ ಮಾರ್ಗದರ್ಶನ ಅವಶ್ಯಕ ಇವುಗಳನ್ನು ಸರಿಯಾಗಿ ತಿಳಿದುಕೊಂಡು ಗುರುವಿನಂತೆ ಜೀವನ ವಿದ್ಯಾರ್ಥಿಗಳು ರೂಪಿಸಿಕೊಳ್ಳಬೇಕೆಂದರು.  

ಕಾರ್ಯಕ್ರಮದಲ್ಲಿ ಮೂಡಲಗಿಯ ಆಶಾಕಿರಣ ಕೋ ಆಪ್ ಬ್ಯಾಂಕಿನ ನಿರ್ದೇಶಕರಾದ ರಮೇಶ ಪಾಟೀಲ, ಪಟಗುಂದಿಯ ಪ್ರಗತಿಪರ ರೈತರಾದ ಗಿರಿಗೌಡ ಪಾಟೀಲ, ಕಾಲೇಜು ಉಪನ್ಯಾಸಕರಾದ ಗೀತಾ ಹಿರೇಮಠ, ಎಂ.ಎಸ್‌.ಒಡೆಯರ, ಪಿ.ಬಿ.ಚೌಡಕಿ, ಸುನೀಲ ಸತ್ತಿ, ಪಿ.ಬಿ.ಪುರವಂತ, ರಶ್ಮೀಕಳ್ಳಿಮನಿ, ಸಂವೇದಿತಾ ಮಳಲಿ, ಸವಿತಾ ಪಡದಲ್ಲಿ, ಅಶ್ವೀನಿ ಗುರುವ  ಮತ್ತಿತರರು ಹಾಜರಿದ್ದರು. ಉಪನ್ಯಾಸಕ ಸಂಜೀವ ಮಂಟೂರ ಸ್ವಾಗತಿಸಿದರು ಉಪನ್ಯಾಸಕ ಮಲ್ಲಪ್ಪ ಪಾಟೀಲ ನಿರೂಪಿಸಿದರು ಉಪನ್ಯಾಸಕ ಶಂಕರ ಪಾಟೀಲ ವಂದಿಸಿದರು. 


ಸುದ್ದಿ ಓದಿ