ಹುಕ್ಕೇರಿ

‘ಹುಕ್ಕೇರಿ ಪಿಕೆಪಿಎಸ್ ನಿರ್ದೇಶಕ ಗೀರೀಶ್ ಪಾಟೀಲ್ ವಿರುದ್ಧ ಕ್ರಿಮಿನಲ್ ಕೇಸ್‌’

‘ಹುಕ್ಕೇರಿ ಪಿಕೆಪಿಎಸ್ ನಿರ್ದೇಶಕ ಗೀರೀಶ್ ಪಾಟೀಲ್ ವಿರುದ್ಧ ಕ್ರಿಮಿನಲ್ ಕೇಸ್‌’

ಹುಕ್ಕೇರಿ, 20 : ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ನಿಯಮಿತ ಹುಕ್ಕೇರಿಯ ನಿರ್ದೇಶಕರಾದ ಗೀರೀಶ್ ಶಂಕರ್ ಗೌಡ ಪಾಟೀಲ್ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿದ್ದು, ಕೋರ್ಟಿನಲ್ಲಿ ಜಾಮೀನು ರಹಿತ ವಾರೆಂಟ್ ಕೂಡ ಬಾಕಿಯಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಇಂತಹ ಸಂದರ್ಭದಲ್ಲಿ ಪಿಕೆಪಿಎಸ್ ಸಭೆಗಳಲ್ಲಿ ಗೀರೀಶ್ ಪಾಟೀಲ್ ನಿಯಮಿತವಾಗಿ ಹಾಜರಾಗಿ, ನಿರ್ದೇಶಕರ ಹುದ್ದೆಯಲ್ಲೇ ಕಾರ್ಯನಿರ್ವಹಿಸುತ್ತಿರುವುದು ಹಲವು ಪ್ರಶ್ನೆಗಳನ್ನೆಬ್ಬಿಸಿದೆ.  

ಪೊಲೀಸರು ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೇ, ಬದಲಿಗೆ ಸಭೆ ಸಮಯದಲ್ಲಿ ರಕ್ಷಣೆ ನೀಡುತ್ತಿರುವುದು ಜನರ ಅನುಮಾನಕ್ಕೆ ಕಾರಣವಾಗಿದೆ. ಗೀರೀಶ್ ಪಾಟೀಲ್ ಅವರು ವಿವಿಧ ಬ್ಯಾಂಕುಗಳಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡದೇ ಇರುವುದೂ ಬೆಳಕಿಗೆ ಬಂದಿದೆ. ಮಾಜಿ ಪುರಸಭೆ ಅಧ್ಯಕ್ಷ ಎ.ಕೆ. ಪಾಟೀಲ್ ಅವರು ಸಂಬಂಧಿತ ಕಚೇರಿಗೆ ಅರ್ಜಿ ಸಲ್ಲಿಸಿದರೂ, ಅಧಿಕಾರಿಗಳು ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತವಾಗಿದೆ.  

ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ವ್ಯಕ್ತಿ ನಿರ್ದೇಶಕ ಹುದ್ದೆಯಲ್ಲಿ ನಿರಾಳವಾಗಿ ಕಾರ್ಯನಿರ್ವಹಿಸುತ್ತಿರುವುದು ಕಾನೂನು ಜಾರಿಗಾರಿಕೆ ವ್ಯವಸ್ಥೆಯ ಗಂಭೀರ ವಿಫಲತೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ. ಮೇಲಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. 


ಸುದ್ದಿ ಓದಿ