"ಯೋಗ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣ"
ಬೀಳಗಿ 26 : ವ್ಯಸನ ಮುಕ್ತ ಸಮಾಜ ನಿರ್ಮಾಣ ಒಂದು ಸಾಮಾಜಿಕ ಬದ್ದತಾ ವಿಷಯವಾಗಿದೆ. ಯೋಗ ಮತ್ತು ಸಮಾಜ ಸೇವೆಯಿಂದಾ ಸಂತೃಪ್ತ ಜೀವನವನ್ನು ಪಡೆಯಬಹುದಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಟಿ. ಪಾಟೀಲ ಕರೆ ನೀಡಿದರು.
ತಾಲೂಕಿನ ಯಡಹಳ್ಳಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗಲಗಲಿ, ಯಡಹಳ್ಳಿ ಹಾಗೂ ತೆಗ್ಗಿ ಕ್ಲಸ್ಟರ್ ಮಟ್ಟದ ಶಿಕ್ಷಕರಿಗೆ "ಯೋಗ ಮತ್ತು ವ್ಯಸನ ಮುಕ್ತ ಸಮಾಜ ನಿರ್ಮಾಣ" ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಆದಾಪೂರ ಮಾತನಾಡಿ ಯೋಗ ಮತ್ತು ವ್ಯಸನ ಮಕ್ತ ಸಮಾಜವು ಗುಣಮಟ್ಟದ ಶಿಕ್ಷಣಕ್ಕೆ ಪೂರಕವಾಗಿವೆ. ಪ್ರತಿಯೊಬ್ಬರು ಧನಾತ್ಮಕ ಚಿಂತನೆ, ನಿಸ್ವಾರ್ಥ ಮನೋಭಾವದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಸತ್ಪ್ರಜೆಯಾಗಲು ಸಾಧ್ಯ ಎಂದರು.
ವಿಜ್ಞಾನಿ ಎಲ್.ವಿ.ನಾಯಕ ಹಾಗೂ ಜೀತೇಂದ್ರ ಪಾಟೀಲ ಯೋಗ ಮತ್ತು ಶಿಕ್ಷಣ ಮಹತ್ವದ ಬಗ್ಗೆ ತಿಳಿಸಿದರು.
ಯೋಗ ತರಬೇತಿದಾರ ಟಿ.ಎಮ್. ಕಟ್ಟಿಮನಿ ಹಾಗೂ ವ್ಯಸನ ಮುಕ್ತದ ಸಂಪನ್ಮೂಲ ವ್ಯಕ್ತಿಗಳಾದ ಆನಂದ ಮತ್ತು ಡಾ.ಅರಿಹಂತ ತರಬೇತಿ ನೀಡಿದರು
ಗ್ರಾಮ ಪಂಚಾಯತ ಅಧ್ಯಕ್ಷರಾದ ಸದಪ್ಪಗೌಡ ನಂದಗಾಂವ, ದೊಡ್ಡಣ್ಣ ದೇಸಾಯಿ, ಹಣಮಂತ ಹನುಮರ, ತಾಲೂಕಾ ದೈಹಿಕ ಶಿಕ್ಷಣ ಪರೀವೀಕ್ಷಕ ಎಸ್.ಎ.ಎತ್ತಿನಮನಿ, ಶಿಕ್ಷಣ ಸಂಯೋಜಕ ಜಗದೀಶ್ ಖೋತ, ಬಿ.ಆರ್.ಪಿಗಳಾದ ಸೋಮಶೇಖರ್ ತಳೇವಾಡ, ನಾನಾಗೌಡ ಪಾಟೀಲ, ಸಿಆರ್.ಪಿ ಗಳಾದ ಎಮ್.ಎನ್.ಜೈನಾಪೂರ. ಎಮ್.ಎನ್.ಅತ್ತಾಲಟ್ಟಿ. ಡಿ.ಆಯ್. ಚಾಂಬರ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ
ಆನಂದ ಬಿರಾದಾರ ಸ್ವಾಗತಿಸಿದರು. ಜಗದೀಶ ಮುಚ್ಚಂಡಿ ನಿರೂಪಿಸಿದರು.