ಹುಕ್ಕೇರಿ

"ಮಾರುತಿ ಅಷ್ಠಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸುವಂತೆ : ಕಾರ್ಯಕರ್ತರಿಂದ ಆಗ್ರಹ"

"ಮಾರುತಿ ಅಷ್ಠಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಫರ್ಧಿಸುವಂತೆ : ಕಾರ್ಯಕರ್ತರಿಂದ ಆಗ್ರಹ"

* ಯಮಕನಮರಡಿ ಕಾರ್ಯಕರ್ತರ ಸಭೆಯಲ್ಲಿ ಕಣ್ಣಿರಿಡುತ್ತ ಭಾಷಣ ಮಾಡಿದ ಮಾರುತಿ ಅಷ್ಟಗಿ,

* ಬಿ,ಜೆ,ಪಿ,ವರಿಷ್ಠರ ಹಾಗೂ ಜಿಲ್ಲಾಧ್ಯಕ್ಷ ಡಾ||ರಾಜೇಶ ನೇಲರ್ಿ ವಿರುದ್ದ ಹರಿಹಾಯ್ದ ಕಾರ್ಯಕರ್ತರು,

ಲೋಕದರ್ಶನ ವರದಿ

ಉಳ್ಳಾಗಡ್ಡಿ-ಖಾನಾಪೂರ: ಮಾರುತಿ ಅಷ್ಠಗಿ ಬೆಂಬಲಿಗರಿಂದ ಯಮಕನಮರಡಿ ಮತಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಭಾರತೀಯ ಜನತಾ ಪಕ್ಷದಿಂದ ಮಾರುತಿ ಅಷ್ಟಗಿ ಅವರಿಗೆ ಟಿಕೇಟ ಕೈ ತಪ್ಪಿದ್ದಕ್ಕೆ ಅವರ ಅಸಂಖ್ಯಾತ ಬೆಂಬಲಿಗರು ಬುಧುವಾರ ದಿ,12 ರಂದು ದಾದಬಾನಟ್ಟಿಯ ರಾಷ್ಟ್ರೀಯ ಹೆದ್ದಾರಿಯಿಂದ ಯಮಕನಮರಡಿಯವರೆಗೆ ನಡೆದುಕೊಂಡು ಬಂದು ಬ್ರಷ್ಟ ಬಿ,ಜೆ,ಪಿ, ಸರಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಹಾಕುತ್ತಾ ಯಮಕನಮರಡಿ ಬಸ್ಸ್ ನಿಲ್ದಾಣದ ಬಳಿ ಜಮಾಯಿಸಿ ಬಿ,ಜೆ,ಪಿ, ಜಿಲ್ಲಾಧ್ಯಕ್ಷರು ಹಾಗೂ ಮಂಡಳ ಅಧ್ಯಕ್ಷರ ವಿರುದ್ದ ಹರಿಹಾಯ್ದು ಅಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು,

   ಯಮಕನಮರಡಿ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಭೆ ಸೇರಿದ ಅಷ್ಠಗಿ ಬೆಂಬಲಿತ ಕಾರ್ಯಕರ್ತರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯ ಕಣಕ್ಕಿಳಿಯುವಂತೆ ಒತ್ತಾಯಿಸಿದರು, ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಮಾರುತಿ ಅಷ್ಠಗಿ ಮಾತನಾಡಿ ಇಂದು ನಾವು ತಂದೆ-ತಾಯಿಗಳನ್ನು ಕಳೆದುಕೊಂಡ ಪರಿಸ್ಥಿತಿಯಲ್ಲಿದ್ದೆವೆ ತಾಯಿಂಗಿಂತ ಹೆಚ್ಚಗಿ ಭಾರತೀಯ ಜನತಾ ಪಕ್ಷವನ್ನು ಪ್ರೀತಿಸಿ ಕ್ಷೇತ್ರದಲ್ಲಿ ಬಿ,ಜೆ,ಪಿ ಯನ್ನು ಸಂಘಟಿಸಿದ್ದೆವೆ ಆದರೆ ಈ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ ಎಂದು ತಿಳಿದು ಕೆಲವರು ಕುತಂತ್ರದಿಂದ ಟಿಕೇಟ ತಪ್ಪಿಸಿದ್ದಾರೆ.

  ನನ್ನ ಅಭಿಮಾನಿಗಳೇ ನನಗೆ ನಿಜವಾದ ಹೈಕಮಾಂಡ 2013-2018 ರಲ್ಲಿ ನಡೆದ ಚುನಾವಣೆಯಲ್ಲಿ ನಮ್ಮೊಂದಿಗಿದ್ದು ಚುನಾವಣೆಯಲ್ಲಿ ನನ್ನನ್ನು ಸೊಲಿಸಿದ್ದಾರೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಮತ್ತು ಇನ್ನೊಬ್ಬರಿಗೆ ಬಿ,ಜೆ,ಪಿ, ಟಿಕೇಟ ಕೊಡುವ ಒಪ್ಪಂದ ವಾಗಿತ್ತೆಂದು ಕೆಲವರು ಹೇಳಿಕೆ ನೀಡುತ್ತಿದ್ದು ಅದು ಸತ್ಯಕ್ಕೆ ದೂರಾಗಿದೆ, ನಿಗಮ       ಮಂಡಳಿಯ ಅಧ್ಯಕ್ಷ ಸ್ಥಾನ ಸಿಕ್ಕನಂತರ ಅದನ್ನು ತಪ್ಪಿಸಲು ಬೆಂಗಳೂರಿನಲ್ಲಿ ಕೆಲವರು ಬಿಡಾರ ಹೂಡಿದ್ದರು ಇನ್ನೆರಡು ದಿನಗಳ ಕಾಯ್ದು ಬರುವ ರವಿವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸುವುದಾಗಿ ತಿಳಿಸಿದಾಗ ಕಾರ್ಯಕರ್ತರು ಒಕ್ಕೊರಲಿನಿಂದ ಒಪ್ಪಿಗೆ ಸೂಚಿಸಿದರು,

    ಮಾಜಿ ಜಿಪಂ, ಸದಸ್ಯರಾದ ಪಾರೇಶ ಮಲಾಜಿ ಮಾತನಾಡಿ ಅಷ್ಟಗಿ ಅವರು ಯಾವುದೇ ಫಲಾಪೇಕ್ಷೆಗಳಿಲ್ಲದೆ ಕ್ಷೇತ್ರದಲ್ಲಿ ಪಕ್ಷವನ್ನು ಸಂಘಟಿಸಿದ್ದು ಇಂಥ ಪ್ರಾಮಾಣಿಕರಿಗೆ ಟಿಕೇಟ್ ಕೈ ತಪ್ಪಿದ್ದು ಖಂಡನೀಯ ನಾವೆಲ್ಲರೂ ಕೂಡಿಕೊಂಡು ಸ್ವತ ಖರ್ಚಿನಿಂದ ಮಾರುತಿ ಅಷ್ಠಗಿಯವರನ್ನು ಗೆಲ್ಲಿಸೋಣ ಎಂದರು,

  ಜನಾರ್ಧನ ಪಾಟೀಲ, ಲಕ್ಷ್ಮಣ ಅಷ್ಠಗಿ ರವಿ ಕುರಾಡೆ, ಬಸವರಾಜ ಊದೋಶಿ, ಪ್ರಲ್ಹಾದ ನಾಯಿಕ,  ಹಾಗೂ ಮಾರುತಿ ಅಷ್ಟಗಿ ಬೆಂಬಲಿಗರು, ಸದಸ್ಯರು ಮುಂತಾದವರು ಉಪಸ್ಥಿತರಿದ್ದರು 

ಸುದ್ದಿ ಓದಿ