ಹುಕ್ಕೇರಿ

ವರುಣನ ಕೃಪೆಗಾಗಿ ಪಾಶ್ಚಾಪೂರದಲ್ಲಿ "ಕತ್ತೆಗಳ ಮದುವೆ

ವರುಣನ ಕೃಪೆಗಾಗಿ ಪಾಶ್ಚಾಪೂರದಲ್ಲಿ "ಕತ್ತೆಗಳ ಮದುವೆ

ಗ್ರಾಮೀಣ ವಲಯದಲ್ಲಿ ವಿಶಿಷ್ಠ ಆಚರಣೆ * ಮುನಿಸಿಕೊಂಡ ವರುಣನನ್ನು ಅಂಗಲಾಚಿದ ರೈತರು, ಗ್ರಾಮಸ್ಥರು

[ಸಂಜೀವ ಅ, ಮುಷ್ಠಗಿ] 

ಉಳ್ಳಾಗಡ್ಡಿ-ಖಾನಾಪೂರ: ಮುಂಗಾರು ಪ್ರವೇಶ ತಡವಾಗಿದ್ದರಿಂದ ಕಂಗಾಲಾದ ರೈತ ಸಮುದಾಯ ಮತ್ತು ಗ್ರಾಮಸ್ಥರು ಮಳೆಗಾಗಿ ಹಲವಾರು ಸಾಂಪ್ರದಾಯಿಕ ಆಚರಣೆಗಳತ್ತ ಮುಖ ಮಾಡುತ್ತಿರುವುದು ಸವರ್ೇ ಸಾಮಾನ್ಯ ಇಂಥ ವಿಶಿಷ್ಠವಾದ ಆಚರಣೆಯಲ್ಲೊಂದಾದ ಕತ್ತೆಗಳ ಮದುವೆ ಯನ್ನು ಶ್ಯಾಸ್ತ್ರೋಕ್ತವಾಗಿ ಮಾಡುವುದರೊಂದಿಗೆ ಭವ್ಯ ಮೆರವಣಿಗೆಯನ್ನು ಸಮೀಪದ ಪಾಶ್ಚಾಪೂರ ಗ್ರಾಮದಲ್ಲಿ ನೆರವೆರಿಸಲಾಯ್ತು.

ಮುನಿಸಿಕೊಂಡ ವರುಣ ಕೃಪೆಗಾಗಿ ಗ್ರಾಮಸ್ಥರು ಕತ್ತೆಗಳ ಮದುವೆಮಾಡಿ ಮೆರವಣಿಗೆ ನಡೆಸಿ ಪ್ರಾರ್ಥನೆ ಸಲ್ಲಿಸಿದರು. ಘಟಪ್ರಭಾ, ಮಾರ್ಕಂಡೇಯ ಹಾಗೂ ಹಿರಣ್ಯಕೇಶಿ, ತಾಮ್ರಪರ್ಣಿ ನದಿಗಳು ಬತ್ತಿದ್ದು ಹುಕ್ಕೇರಿ ತಾಲೂಕಿನ ಎರಡು ಜಲಾಶಯಗಳಾದ ಮಾರ್ಕಂಡೇಯ ಹಾಗೂ ರಾಜಾಲಖಮಗೌಡಾ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದು ಕೋಳವೆ ಬಾವಿಗಳು ಬರಿದಾಗಿವೆ ರೈತರು ಬಿತ್ತನೆಗಾಗಿ ಭೂಮಿಯನ್ನು ಹದಗೊಳಿಸಿ ಮಳೆಗಾಗಿ ಆಕಾಶದತ್ತ ಮುಖಮಾಡಿದ್ದಾರೆ. ಕುಡಿ ನೀರಿಗೂ ಬರಬರುವ ಸಾಧ್ಯತೆಗಳಿದ್ದು ಭೂತಾಯಿಯ ಒಡಲನ್ನು ತಣಿಸಿ ವರುಣ ತಂಪೆರೆದು ಕಾಪಾಡುವಂತೆ ಪ್ರಾರ್ಥನೆ ನಡೆಸಿದ ರೈತ ಸಮುದಾಯ ವರುಣನಿಗಾಗಿ ಹರಸಾಹಸ ಪಡುತ್ತಿದ್ದಾರೆ.

ವಿಶಿಷ್ಠ ಆಚರಣೆ:-ಪೂರ್ವಜರ ನಂಬಿಕೆಯಂತೆ ಕಪ್ಪೆಗಳ ಮದುವೆ, ಗುರ್ಚಿಗೆ ನೀರು ಹಾಕುವುದು, ಕತ್ತೆಗಳ ಮದುವೆಗಳಂತಹ ಸಾಂಪ್ರದಾಯಿಕ ಆಚರಣೆಗಳನ್ನು ನಂಬಿದ್ದ ಜನ  ಮುನಿಸಿಕೊಂಡಿದ್ದ ಮಳೆರಾಯನಿಗಾಗಿ ಪಾಶ್ಚಾಪೂರದ ಆಲೂರವ್ವನ ದೇವಸ್ಥಾನದಲ್ಲಿ ಜೋಡು ಕತ್ತೆಗಳನ್ನು ತಂದು ಮದುವೆಗಾಗಿ ಹೂಮಾಲೆ, ಭಾಸಿಂಗ್, ಅರಿಶಿಣ-ಕುಂಕುಮ ಸೇರಿದಂತೆ ಎಲ್ಲ ಸಾಮಗ್ರಿಗಳನ್ನು ತಂದು ಶ್ಯಾಸ್ತ್ರೋಕ್ತವಾಗಿ ಮದುವೆಯನ್ನು ಮಾಡಿ ಜೋಡು ಕತ್ತೆಗಳ ಭವ್ಯ ಮೆರವಣಿಗೆಯನ್ನು ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬಿದಿಗಳಲ್ಲಿ ನಡೆಸಿ ಗ್ರಾಮಸ್ಥರು ಮಳೆರಾಯಣಿಗೆ ಮೊರೆಯಿಟ್ಟು ಮಳೆಯಾಗುವಂತೆ ಪ್ರಾಥರ್ಿಸಿದರು. ಗ್ರಾಮದ ರೈತ ಸಮುದಾಯ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು 

ಸುದ್ದಿ ಓದಿ