“ಅಂತರಾಳದಲ್ಲಿ ಹುಟ್ಟುವ ಸ್ವಯಂ ದೀಪ್ತಿಯೇ ನಾಯಕತ್ವ”
ಹುಕ್ಕೇರಿ 07: ಸಿದ್ದರಾಮೇಶ್ವರ ಶಿಕ್ಷಣ ಸಂಸ್ಥೆಯ ಚಂದ್ರಗಿರಿ ಮಹಿಳಾ ಶಿಕ್ಷಣ ಮಹಾ ವಿದ್ಯಾಲಯ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆಯ ಸಹಯೋಗದೊಂದಿಗೆ “ಪೌರತ್ವ ತರಬೇತಿ ಶಿಬಿರ”ವು ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂನ ಮಹಿಳಾ ಕಲ್ಯಾಣ ಸಂಸ್ಥೆಯ ಆಶ್ರಯ ಸ್ವಧಾರ ಗೃಹ ಮಹಿಳಾ ವಸತಿ ಗೃಹದಲ್ಲಿ ಉದ್ಘಾಟನೆಗೊಂಡಿತು. ಗಿರಿಜಾ ಸುಂಕದವರು ಮಹಿಳಾ ಕಲ್ಯಾಣ ಸಂಸ್ಥೆಯ ಗೌರವ ಕಾರ್ಯದರ್ಶಿಯಾದ ವೈಜಯಂತಿ.ಎಂ.ಚೌಗಲಾ ಹಾಗೂ ಶಿವಾನಂದ ಜರ್ಲಿಯವರ ಕಿರು ಪರಿಚಯ ನೀಡಿದರು. ಸ್ವಾಭಿಮಾನದ ಶ್ರಮದ ಬಾಳ್ವೆಯ ಕೂಡಿ ನಲಿಯುವ, ನಲಿದು ಕಲಿಯುವ, ಕಲಿತು ಕಲಿಸುವ ಕಲೆಯ ಕಸುಬನ್ನು ಕಲಿಸುವುದು ಪೌರತ್ವ ತರಬೇತಿ ಶಿಬಿರದ ಮುಖ್ಯ ಧ್ಯೇಯವಾಗಿದೆ ಎಂದು ವೈಜಯಂತಿ.ಎಂ.ಚೌಗಲಾರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೆ.ಬಿ. ಹಿರೇಮಠರವರು ಅಧ್ಯಕ್ಷ ಸ್ಥಾನ ವಹಿಸಿದ್ದರು. ಶಿವಾನಂದ ಜರ್ಲಿಯವರು ವ್ಯಕ್ತಿತ್ವ ವಿಕಸನ ಹಾಗೂ ನಾಯಕತ್ವ ಗುಣಗಳ ಕುರಿತು ಕಾರ್ಯಾಗಾರ ನೆರವೇರಿಸಿದರು.
ಸಾಯಂಕಾಲ ಕರಕುಶಲ ತರಬೇತಿಯ ಕಾರ್ಯಾಗಾರವನ್ನು ಪಿರಾಜಿ ಲೋಹರರವರು ಯಶಸ್ವಿಗೊಳಿಸಿದರು. ಪ್ರಾಚಾರ್ಯ .ಎ.ಎಲ್. ಪಾಟೀಲರವರು ಸರ್ವರನ್ನು ಸ್ವಾಗತಿಸಿದರು. ಅಕ್ಷತಾ ವಿ. ಹಾಗೂ ರೂಪಾ ಟಿ. ಇವರು ನಿರೂಪಣೆ ಮಾಡಿದರು. ಪೌರತ್ವ ತರಬೇತಿ ಶಿಬಿರದ ಮೊದಲನೆ ದಿನವು ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಜರುಗಿ ಪದ್ಮಶ್ರೀ ಬುದ್ನೂರರವರ ವಂದನಾರೆ್ಣಯೊಂದಿಗೆ ಮುಕ್ತಾಯಗೊಂಡಿತು.