ಗದಗ

ಅಮುಲ್ ಉತ್ಪನ್ನಗಳನ್ನು ಎಸದು ಕರವೇ ಪ್ರತಿಭಟನೆ

ಅಮುಲ್ ಉತ್ಪನ್ನಗಳನ್ನು ಎಸದು ಕರವೇ ಪ್ರತಿಭಟನೆ

ಲೋಕದರ್ಶನ ವರದಿ

ಗದಗ 12: ಗದಗ ನಗರದ ಗಾಂಧಿ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಆಶ್ರಯದಲ್ಲಿ ಅಮುಲ್ ಉತ್ಪನ್ನಗಳನ್ನು ರಸ್ತೆಗೆ ಎಸೆದು, ಭಾವಚಿತ್ರಗಳಿಗೆ ಬೆಂಕಿ ಹಚ್ಚುವ ಮೂಲಕ ಪ್ರತಿಭಟನೆ ಮಾಡಲಾಯಿತು.

ಹಾಲು, ಮೊಸರು, ತುಪ್ಪ, ಬೆಣ್ಣೆ ಇತ್ಯಾದಿ ಅಮಲು ಉತ್ಪನ್ನಗಳನ್ನು ಬೀದಿಗೆ ಎಸೆದು ಬೆಂಕಿ ಹಚ್ಚವ ಮೂಲಕ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು.

ಕರವೇ ಜಿಲ್ಲಾ ಅಧ್ಯಕ್ಷ ಶರಣು ಗೋಡಿ ಮಾತನಾಡಿ ಅಮುಲ್ ಸಂಸ್ಥೆ ಕನ್ನಡಿಗರ ಭಾವನೆ ಜೊತೆ ಆಟ ಆಡುತ್ತಿದೆ. ಅಮುಲ್ ಹಾಲು, ಮೊಸರು, ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಕನ್ನಡಿಗರ ಕಟ್ಟಿದ ಹೆಮ್ಮೆಯ ಸಂಸ್ಥೆ ಕೆಎಂಎಫ್ ಇದರಿಂದ ನಂದಿನಿ ಬ್ರಾಂಡ್ ಕನ್ನಡಿಗರ ಆಸ್ಮಿತೆ ಅದನ್ನು ನಾಶಪಡಿಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಕೇಂದ್ರ ಸರ್ಕಾರ ನಂದಿನಿಯನ್ನು ಅಮುಲ್ ಅಮೂಲ್ನೊಂದಿಗೆ  ವಿಲೀನಗೊಳಿಸುವ ಪ್ರಯತ್ನ ನಡೆಯುತ್ತಿದೆ. ವಿಲೀನಗೊಳಿಸಿದ್ದೆ ಆದರೆ ಕರ್ನಾಟಕ ಜನತೆ ದಂಗೆ ಹೇಳುವುದಂತೂ ಶತಸಿದ್ಧ ಎಂದು ಎಚ್ಚರಿಸಿದರು 

ಗದಗ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ನಿಂಗನಗೌಡ ಮಾಲಿಪಾಟೀಲ್, ಜಿಲ್ಲಾ ಉಪಾಧ್ಯಕ್ಷ ಹನುಮಂತ ಪೂಜಾರ, ಯುವ ಘಟಕದ ಜಿಲ್ಲಾ ಉಪಾಧ್ಯಕ್ಷ  ಮಾರುತಿ ಈಳಗೇರ, ಮುಂಡರಗಿ ತಾಲೂಕ ಅಧ್ಯಕ್ಷ ರಾಮನಗೌಡ ಹಳಿಮನಿ, ನರಗುಂದ ತಾಲೂಕ ಅಧ್ಯಕ್ಷ ಕಿಲ್ಲೆದಾರ್, ಮಹಿಳಾ ಘಟಕದ ಕಾರ್ಯದರ್ಶಿಯಾದ ಮಹಾದೇವಿ ದೊಡ್ಡಗೌಡ್ರು, ಮುಳಗುಂದ ಅಧ್ಯಕ್ಷ ಹುಸೇನ ಅಕ್ಕಿ,

ಸಲೀಂ ಬೋಲೇಖಾನ್, ಪವನ್ ಕರಿನಾಯ್ಕರ್, ಇಸಾಕ್ ನದಾಫ್, ಮುಸ್ತಾಕ್  ದಾಯನವರ್ ಮುಂತಾದವುರು ಹಾಜರಿದ್ದರು 

ಸುದ್ದಿ ಓದಿ