ಧಾರವಾಡ - ಹುಬ್ಬಳ್ಳಿ

ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮ

ಧಾರವಾಡ: ಜನಪದ ಸಾಹಿತ್ಯವು ಎಲ್ಲ ಸಾಹಿತ್ಯಕ್ಕೆ ತಾಯಿ ಬೇರು ಇದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ವರ್ಷವಿಡಿ ಬರುವ ಎಲ್ಲ ಹಬ್ಬ ಹರಿದಿನಗಳಿಗೂ ನಮ್ಮ ಹಿರಿಯರು ಈ ಸಾಹಿತ್ಯವನ್ನು ಹಂಚುತ್ತಾ ಬಂದಿದ್ದಾರೆ. ವಿಶೇಷವಾಗಿ ನಾಗರ ಪಂಚಮಿ ಶ್ರಾವಣ ಮಾಸದಲ್ಲಿ ಜನಪದವು ಹಾಸು ಹೊಕ್ಕಾಗಿದೆ, ಎಂದು ಜಾನಪದ ಗಾರುಡಿಗ ಡಾ, ರಾಮು ಮೂಲಗಿ ಮಾತನಾಡಿದರು. 

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕವು ಏರ್ಪಡಿಸಿದ ಜಾನಪದ ರಸ ಸಂಜೆ ಹಾಗೂ ಹೆಣ್ಣು ಮಕ್ಕಳಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿದರು. ನಂತರ ಕಾರ್ಯಕ್ರಮದ ನೇತೃತ್ವ ವಹಿಸಿದ ಗುರುರಾಜ ಹುಣಶಿಮರದ ಮಾತನಾಡಿ ನಮ್ಮ ಜಿಲ್ಲಾ ಮಹಿಳಾ ಘಟಕವು ಜಾನಪದ ಹಾಗೂ ಉಡಿ ತುಂಬುವ ಕಾರ್ಯಕ್ರಮವನ್ನು ಈ ಶ್ರಾವಣ ಮಾಸದಲ್ಲಿ ಹಮ್ಮಿಕೊಂಡಿದ್ದು, ಅಭಿನಂದನಿಯ ಎಂದರು. ನಂತರ ಆಗಮಿಸಿದ ಸುಮಂಗಲಿಗೆಯರೆಲ್ಲ ಉಡಿ ತುಂಬಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ಪ್ರಭಾವತಿ ವಡ್ಡಿನ, ಜಿಲ್ಲಾ ಅಧ್ಯಕ್ಷೆ ವಿಜಯಲಕ್ಷ್ಮೀ ಕಲ್ಯಾಣಶೆಟ್ಟರ, ಪ್ರಧಾನ ಕಾರ್ಯದರ್ಶಿ  ಜಯಶ್ರೀ ಪಾಟೀಲ, ತಾರಾದೇವಿ ವಾಲಿ, ಪಾರ್ವತಿ ಸಾಲಿಮಠ, ಅರುಣಾ ಹಳ್ಳಿಕೇರಿ, ಸುವರ್ಣಾ  ಪರಪ್ಪಗೌಡರ, ಡಾ, ಸುವರ್ಣಾ  ಬಿರಾದಾರ, ಪಾರ್ವತಿ ಹಾಲಭಾವಿ, ಸಂಧ್ಯಾ ಅಂಬಡಗಟ್ಟಿ, ಬಸಂತಿ ಹಪ್ಪಳದ, ಸುಧಾ ಕಬ್ಬೂರ, ಶಶಿಕಲಾ ಶಾಸ್ತ್ರೀಮಠ, ಗೀತಾ ಕುಂಬಿ, ಶಿವಶರಣ ಕಲಬಶೆಟ್ಟರ, ಬಿ.ಎಸ್.ಗೋಲಪ್ಪನವರ ಮುಂತಾದವರು ಇದ್ದರು 

ಸುದ್ದಿ ಓದಿ