ಸಾಹಿತ್ಯ ರಚನಗೆ ತಾಳ್ಮೆ ಬಹಳ ಮುಖ್ಯ: ಮಳ್ಳೂರ
ಲೋಕದರ್ಶನ ವರದಿ,
ಜಮಖಂಡಿ 30: ಸಾಹಿತ್ಯಕ್ಕೆ ಶಬ್ದಗಳೆ ಮೂಲಾಧಾರವಾಗಿದೆ. ಸಾಹಿತ್ಯ ರಚನಗೆ ತಾಳ್ಮೆ ಬಹಳ ಮುಖ್ಯವಾಗಿದೆ ಎಂದು ಸಾಹಿತಿ ಡಾ ಶಾರದಾ ಮಳ್ಳೂರ ಹೇಳಿದರು.
ಉತ್ತರಾದಿ ಮಠದಲ್ಲಿ ಶ್ರೀಪೂರ್ಣಬೋಧ ಬೀಡಕರ ವಿರಚಿತ ಕಥೆ ಮತ್ತು ಕವನ ಸಂಕಲನ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಪ್ರೋ, ಡಾ, ವಿನಾಯಕ ಕುಲಕರ್ಣಿ ಕೃತಿ ಪರಿಚಯಿಸಿದರು. ಡಾ, ಯಶವಂತ ಕೊಕ್ಕನವರ ಮಾತನಾಡಿ, ಸ್ರ್ತೀ ಪುರಷರಿಗೆ ಶಕ್ತಿಯಾಗಿ ನಿಲ್ಲುತ್ತಾಳೆ. ಮನೆಯ ಮಹಿಳೆಗೂ ಸಹ ಸಾಹಿತ್ಯದ ವಲವಿರಬೇಕು ಅಂದಾಗ ಮಾತ್ರ ಸಾಹಿತ್ಯ ರಚನೆಯಾಗಲು ಸಾಧ್ಯವಾಗುತ್ತದೆ. ಇಂದು ಬಿಗಡೆ ಹೊಂದಿದ ಪುಸ್ತಕಗಳು ಜೀವನ ಮೌಲ್ಯಗಳನ್ನು ತಿಳಿಸುತ್ತದೆ. ಕಷ್ಟದ ಕುಲುಮೆಯಲ್ಲಿ ಬೆಂದವನೇ ಮುಂದೆ ಬೆಳೆಯುತ್ತಾನೆ. ಸಾಹಿತ್ಯಕ್ಕೆ ಶಬ್ದ ಸಂಗ್ರಹವಿರಬೇಕು. ತಾಳ್ಮೆಯಿರಬೇಕು. ಇಂದು ಕಲ್ಪನೆಯ ಸಾಹಿತ್ಯಕ್ಕಿಂತ ವಾಸ್ತವ ಸಾಹಿತ್ಯಬೇಕಾಗಿದೆ ಸಾಹಿತ್ಯದಲ್ಲಿ ಎಲ್ಲ ರುಚಿಯಿರಬೇಕು ಎಂದರು.
ಶ್ರೀಪೂರ್ಣಬೋಧ ಬೀಡಕರ, ಪ್ರೀಯಾ ಹರಿದಾಸ ಸೇರಿದಂತೆ ಇತರರು ಇದ್ದರು. ಕೃಷ್ಣಾ ಕುಲಕರ್ಣಿ ಪ್ರಾರ್ಥಿ ಸಿದರು. ಅಶ್ವಿನಿ ಬೀಡಕರ ಸಹೋದರಿಯರು ಸ್ವಾಗತ ಗೀತೆ ಹಾಡಿದರು, ರಾಜೇಂದ್ರ ಹುಲ್ಯಾಳಕರ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಿಸಿದರು, ಸುರೇಶ ಶುಕ್ಲೆ ಸ್ವಾಗತಿಸಿದರು,