ಜಮಖಂಡಿ

ಬಿಪಿಎಲ್ ಕಾಡ೯ದಾರರಿಗೆ ವಿದ್ಯುತ್ ನೀಡುವಂತೆ ಸೂಕ್ತ ಮಾರ್ಗಸೂಚಿ ರಚಿಸಿ: ಶಾಸಕ ಆನಂದ ನ್ಯಾಮಗೌಡ

ಬಿಪಿಎಲ್ ಕಾಡ೯ದಾರರಿಗೆ ವಿದ್ಯುತ್ ನೀಡುವಂತೆ ಸೂಕ್ತ ಮಾರ್ಗಸೂಚಿ ರಚಿಸಿ: ಶಾಸಕ ಆನಂದ ನ್ಯಾಮಗೌಡ
ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದ ರೈತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಆನಂದ ನ್ಯಾಮಗೌಡ

ಲೋಕದರ್ಶನ ವರದಿ,

ಜಮಖಂಡಿ18: ಮುಂಬರುವ ದಿನಗಳಲ್ಲಿ ಪ್ರತಿ ಮನೆಗೆ 200 ಯುನಿಟ್ಗಳ ವಿದ್ಯುತ್ ಹಾಗೂ ನಿರುದ್ಯೋಗಿ ಮಹಿಳೆಯರಿಗೆ 2 ಸಾವಿರ ರೂ, ನೀಡುವ ಭರವಸೆಯನ್ನು ನೀಡಿದ್ದು, ಅದನ್ನು ಖಂಡಿತ ಪೂರೈಕೆ ಮಾಡಲು ಸಿದ್ಧವಿದೆಂದು ಶಾಸಕ ಆನಂದ ನ್ಯಾಮಗೌಡ ತಿಳಿಸಿದರು.

ತಾಲೂಕಿನ ಆಲಗೂರು ಗ್ರಾಮದಲ್ಲಿ ನಡೆದ ರೈತರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

 ಅನುಕೂಲಸ್ಥರಿಗೆ ಪುಕ್ಕಟೆ ವಿದ್ಯುತ್ ನೀಡದೇ ಬಡವರಿಗೆ, ಬಿಪಿಎಲ್ ಕಾಡ೯ದಾರರಿಗೆ ವಿದ್ಯುತ್ ನೀಡುವಂತೆ ಸೂಕ್ತ ಮಾರ್ಗಸೂಚಿ ರಚಿಸಿ,ವಿದ್ಯುತ್ ನೀಡಲಾಗುತ್ತದೆ. ಪ್ರಜಾಧ್ವನಿ ಕಾರ್ಯಕ್ರಮ ಜನರ ಧ್ವನಿಯಾಗಿದ್ದು, ಈ ನಾಡಿನ ಜನರ ಬೇಡಿಕೆಗಳನ್ನು ಈಡೇರಿಸುವ ಕಾರ್ಯಕ್ರಮವಾಗಿದೆ. ಈ ಭಾಗದಲ್ಲಿ ಬಹಳ ವರ್ಷಗಳಿಂದ ಅಪೂರ್ಣವಾಗಿದ್ದು, ಮುಂದಿನ ದಿನದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಕೈಗೆತ್ತಿಕೊಂಡು 2 ಲಕ್ಷ ಕೋ,ರು,ಗಳನ್ನು ಅನುದಾನ ಬಿಡುಗಡೆ ಮಾಡಿ ಈ ಯೋಜನೆಯನ್ನು ಪೂರ್ಣಗೊಳಿಸಲು ಕಾಂಗ್ರೆಸ್ ಸರ್ಕಾರ ಸಿದ್ದವಿದೆಂದು ಪ್ರಶ್ನಯೊಂದಕ್ಕೆ ಉತ್ತರಿಸಿದರು. ಈ ಹಿಂದೆ ವಿಜಯಪೂರದಲ್ಲಿ ನಡೆದ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಲು ನಿರ್ಣಯ ಕೈಗೊಂಡಿದೆ ಎಂದರು.

ಪ್ರಬಲ ಆಕಾಂಕ್ಷಿಗಳಿಲ್ಲ:

ಜಮಖಂಡಿ ಮತಕ್ಷೇತ್ರಕ್ಕೆ ನನ್ನ ವಿರುದ್ದ ಯಾರು ಪ್ರತಿಸ್ಪರ್ಧೆಗಳಿಲ್ಲ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯಾನವರು ಅನೇಕ ಸಾರ್ವಜನಿಕ ಸಭೆಗಳಲ್ಲಿ ಆನಂದ ನ್ಯಾಮಗೌಡ ಅವರಿಗೆ ಮುಂದಿನ ಚುನಾವಣೆಯಲ್ಲಿ ಆಶೀವಾದ ಮಾಡುವಂತೆ ವಿನಂತಿಸಿಕೊಂಡಿದ್ದು, ನನಗೆ ಕಾಂಗ್ರೆಸ್ ಪಕ್ಷದಲ್ಲಿ ವಿರೋಧಿಗಳಿಲ್ಲ ಎಂಬುದು ಸ್ಪಷ್ಟವಾಗುತ್ತದೆಂದು ಹೇಳಿದರು.

ಕಳೆದ ಬಾರಿ ನಡೆದ ಉಪ ಚುನಾವಣೆಗೂ ಸಾಮಾನ್ಯ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದ್ದು, ಅಂದು ನಮ್ಮ ತಂದೆ ದಿ.ಸಿದ್ದು ನ್ಯಾಮಗೌಡ ನಿಧನ ಅನುಕಂಪ ಅಲೆ ಇತ್ತು. ಆದರೆ ಇಂದು ಈವರೆಗೆ ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನೋಡಿ, ಜನ ಮೆಚ್ಚಿ ನನಗೆ ಮತ ನೀಡಲಿದ್ದು, ಈ ಬಾರಿ ಮತ್ತೊಮ್ಮೆ ನಾನೇ ಗೆದ್ದು ಬಂದು ಜನರ ಸೇವೆ ಮಾಡುವುದಾಗಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು. 

ಕಡೆಗೆಣಿಸಿಲ್ಲ:

ಕಳೆದ ನಾಲ್ಕೈದು ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯರನ್ನು ಯಾವತ್ತೂ ಕಡೆಗಣಿಸಿಲ್ಲ. ಯುವಕರೊಂದಿಗೆ ಹಿರಿಯರ ಜೊತೆ ನಿಕಟ ಸಂಪರ್ಕವಿಟ್ಟುಕೊಂಡು ಕ್ಷೇತ್ರದ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಅದೇ ನನಗೆ ಶ್ರೀರಕ್ಷೆಯಾಗಲಿದೆ. ಕಳೆದ ಬಾರಿ ನಮ್ಮ ಸರಕಾರ 165 ಭರಸವಸೆ ನೀಡದ್ದು, ಅದರಲ್ಲಿ 158 ಬೇಡಿಕೆಗಳನ್ನು ಈಡೇರಿಸಿದ್ದು, ಅದನ್ನು ಹೊರತು ಪಡಿಸಿ, ಹೆಚ್ಚಿಗೆ 30 ಯೋಜನೆ ಜಾರಿಗೊಳಿಸಿದೆ ಎಂದರು.

ಹೈಕಮಾಂಡ ನಿರ್ಧಾರ:  ಕಾಂಗ್ರೆಸ್ ಪಕ್ಷದ ಹೈಕಮಾಂಡ ನಿರ್ಣಯಿಸಿ, ಸೂಕ್ತ ವ್ಯಕ್ತಿಯೇ ಮುಖ್ಯಮಂತ್ರಿಗಳಾಗುತ್ತಾರೆಂದು ಪ್ರಶ್ನೆಗೆ ಉತ್ತರಿಸಿದರು. 


ಸುದ್ದಿ ಓದಿ