ಉತ್ತರ ಕರ್ನಾಟಕದಲ್ಲಿ ಕೇಸರಿ ಗರ್ಜಿಸಲಿದೆ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಪ್ರಭಾಕರ ಕೋರೆ ವಿಶ್ವಾಸ
ಮಾಂಜರಿ 18: ಉತ್ತರ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ಅವುಗಳಲ್ಲಿ 7 ಮುಂಬೈ ಕರ್ನಾಟಕದಲ್ಲಿವೆ. ಕಳೆದ ಬಾರಿ 7 ರಲ್ಲಿ 6 ಕ್ಷೇತ್ರಗಳನ್ನು ಬಿಜೆಪಿ ಗೆದ್ದಿತ್ತು. ಚಿಕ್ಕೋಡಿ ಮಾತ್ರ ಸ್ವಲ್ಪದರಲ್ಲಿ ಕೈಪಾಲಾಗಿತ್ತು. ಆದರೆ ಈ ಬಾರಿ ಈ ಏಳೂ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮಕ್ಕೆ ಬಂದಿರುವ ರಾಜ್ಯಸಭಾ ಸದಸ್ಯ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಪ್ರಭಾಕರ ಕೋರೆ ಪ್ರಕಾರ ಮುಂಬೈ ಕನರ್ಾಟಕದ ಏಳೂ ಕ್ಷೇತ್ರಗಳು ಬಿಜೆಪಿ ಪಾಲಾಗಲಿವೆ ಎಲ್ಲಿ ನೋಡಿದರೂ ಮೋದಿ ಅಲೆ ಇದೆ ಹಾಗಾಗಿ ಅಭ್ಯರ್ಥಿ ಗಳಿಂದ ಮೋದಿ ಪ್ರಭಾವ ಹೆಚ್ಚು ಕೆಲಸ ಮಾಡಲಿದೆ ಎಂದರು.
ಈ 7ರಲ್ಲಿ 4 ಕ್ಷೇತ್ರವಂತೂ ಬಿಜೆಪಿ ಪಾಲಿಗೆ ಸುಲಿದಿಟ್ಟ ಬಾಳೆ ಹಣ್ಣಿನಷ್ಟು ಸುಲಭವಾಗಿವೆ. ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಹಾಗೂ ಬಿಜಾಪೂರದಲ್ಲಿ ಬಿಜೆಪಿಗೆ ಪೈಪೋಟಿಯೇ ಇಲ್ಲ. ಇನ್ನೂ ಹಾವೇರಿ ಬಾಗಲಕೋಟೆ ಮತ್ತು ಚಿಕ್ಕೋಡಿಯಲ್ಲಿ ಸ್ವಲ್ಪ ಪೈಪೋಟಿ ಇದೆ ಆದರೆ ಬಿಜೆಪಿ ಗೆಲುವು ನಿಶ್ಚಿತ ಎನ್ನುತ್ತಾರೆ ಪ್ರಭಾಕರ ಕೋರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಕಳೆದ 5 ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಎಲ್ಲ ವರ್ಗದ ಜನರನ್ನು ತಲುಪಿದೆ. ಎಲ್ಲ ವಿಭಾಗಗಳಲ್ಲಿ ಕೆಲಸ ಮಾಡಿದೆ. ಹಾಗಾಗಿ ಕಳೆದ ಬಾರಿಗಿಂತ ರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ರಾಷ್ಟ್ರದಲ್ಲಿ ಮೋದಿ ಬಿಟ್ಟರೆ ಪ್ರಧಾನಿಯಾಗುವ ಯೋಗ್ಯತೆ ಯಾರಿಗಿದೆ? ಮಹಾಘಟಬಂಧನ ಬೆಂಗಳೂರಿಗಷ್ಟೆ ಸೀಮಿತವಾಗಿದೆ. ಒಂದೊಂದು ಪಕ್ಷಗಳು ಒಂದೊಂದು ಕಡೆ ಮುಖ ಮಾಡಿವೆ. ರಾಹುಲ್ ಮಮತಾ, ಮಾಯಾವತಿ ಯಾರೂ ಪ್ರಧಾನಿ ಸ್ಥಾನಕ್ಕೆ ಯೋಗ್ಯತೆ ಹೊಂದಿಲ್ಲ. ಹಾಗಾಗಿ ಮೋದಿ ಈ ದೇಶಕ್ಕೆ ಅನಿವಾರ್ಯವಾಗಿದ್ದಾರೆ ಎಂದು ಕೋರೆ ಹೇಳಿದರು.
ಬಡವರಿಗೆ 72 ಸಾವಿರ ರೂ. ನೀಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ. ಇದು ತಲೆಬುಡವಿಲ್ಲದ ಘೋಷಣೆ. ಇದಕ್ಕೆ ಲೆಕ್ಕಾಚಾರವೇ ಇಲ್ಲ. ಎಲ್ಲಿಂದ ಹಣ ಹೊಂದಿಸುತ್ತಾರೆ ಎನ್ನುವೂದು ಗೊತ್ತಿಲ್ಲ. ಈಗ ವಾರಾಣಸಿಯಿಂದ ಸ್ಪರ್ಧಿಸುವುದಾಗಿ ಹೇಳುತ್ತಿರುವ ಪ್ರಿಯಾಂಕಾ ಗಾಂಧಿ ಈ ಮೊದಲು ವಾರಾಣಸಿಯನ್ನು ನೋಡಿದವಳೆ ಅಲ್ಲ. ಚುನಾವಣೆ ಬಂದಾಗ ಹಿಂದೂ ದೇವರು ಎಲ್ಲ ನೆನಪಾಗುತ್ತಾರೆ ಎಂದು ಪ್ರಭಾಕರ ಕೋರೆ ಟೀಕಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಉತ್ತರ ಕರ್ನಾಟಕದ ಕಡೆ ಒಲವು ಕಡಿಮೆ. ಕೃಷ್ಣಾ ಮೆಲ್ದಂಡೆ ಸೇರಿದಂತೆ ಇಲ್ಲಿಯ ಯಾವ ಸಮಸ್ಯೆಗೂ ಕಾಂಗ್ರೆಸ್ ಸ್ಪಂದಿಸಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿಯಂತೂ ತಮಗೆ ಉತ್ತರ ಕನರ್ಾಟಕದವರು ಮತ ಹಾಕಿಲ್ಲ, ಹಾಗಾಗಿ ತಮಗೆ ಉತ್ತರ ಕನರ್ಾಟಕ ಸಂಬಂಧವಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಹಾಗಾಗಿ ಈ ಎರಡೂ ಪಕ್ಷಗಳನ್ನು ಮತದಾರರು ಉತ್ತರ ಕನರ್ಾಟಕದಿಂದ ಓಡಿಸಿದ್ದಾರೆ ಎಂದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 