ಮುಗಳಖೋಡ ಇಂದಿರಾ ಕ್ಯಾಂಟೀನ್‌ನಲ್ಲಿ ಕೊಳೆತ ತರಕಾರಿ ಬಳಕೆ ಪಲಾಯನ ಗೈದ ಸಿಬ್ಬಂದಿ, ಗ್ರಾಮಸ್ಥರಿಂದ ಕ್ಯಾಂಟೀನ್‌ಗೆ ಬೀಗ !

ಮುಗಳಖೋಡ ಇಂದಿರಾ ಕ್ಯಾಂಟೀನ್‌ನಲ್ಲಿ ಕೊಳೆತ ತರಕಾರಿ ಬಳಕೆ ಪಲಾಯನ ಗೈದ ಸಿಬ್ಬಂದಿ, ಗ್ರಾಮಸ್ಥರಿಂದ ಕ್ಯಾಂಟೀನ್‌ಗೆ ಬೀಗ ! Rotten vegetables used in Mugalakhoda Indira Canteen; staff flees, villagers lock canteen!

 ಮುಗಳಖೋಡ 03 : ಪಟ್ಟಣದ ಪುರಸಭೆ ಎದುರಿಗೆ ಇರುವ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರ ತಯಾರಿಕಾ ಸಿಬ್ಬಂದಿಯಿಂದ ಕೊಳೆತ ತರಕಾರಿ ಬಳಕೆ ಮಾಡುತ್ತಿರುವುದನ್ನು ಕಂಡು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದಾಗ ಸಮಜಾಯಿಸಲು ಮುಂದಾದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಜನರು ಹೆಚ್ಚು ಜಮಾಯಿಸತೊಡಗಿದರು. ಜನರ ಆಕ್ರೋಶದ ಕಟ್ಟೆ ಒಡೆಯಿತು. ಅದನ್ನು ಅರಿತ ಓರ್ವ ಪುರುಷ ಸಿಬ್ಬಂದಿ ಓಡಿ ಹೋದ ಘಟನೆ ಸೋಮವಾರ 3 ಘಂಟೆಗೆ ನಡೆದಿದೆ.  

ಮಹಿಳಾ ಸಿಬ್ಬಂದಿಗಳಾದ ನೀಲಾ ಕರೀಬೀಮ ಗೋಳ ಹಾಗೂ ರಾಧಿಕಾ ಸೋನೋನಿ ತಮ್ಮದಲ್ಲದ ತಪ್ಪಿಗೆ ಅಸಹಾಯಕತೆಯಿಂದ ಸುಮ್ಮನೆ ನಿಂತರು. ಜನರು ತಂಡೋಪ ತಂಡವಾಗಿ ಇಂದಿರಾ ಕ್ಯಾಂಟೀನ್ ಗೆ ಬರುತ್ತಿರುವುದನ್ನು ಕಂಡು ಓಡಿಹೋದ ಸಿಬ್ಬಂದಿ ನಂತರ ಪುರಸಭೆ ಪೌರಕಾರ್ಮಿಕರು ಹಾಗೂ ಸಿಬ್ಬಂದಿ ವರ್ಗದವರನ್ನು ಕರೆಯಿಸಿ ಮುಖ್ಯಾಧಿಕಾರಿಗಳು ಬರುವವರಿಗೆ ಕ್ಯಾಂಟೀನ್‌ಗೆ ಬೀಗ ಹಾಕಿದರು.

ಈ ಸಂದರ್ಭದಲ್ಲಿ ಚೇತನ ಯಡವನ್ನವರ, ರೈತ ಮುಖಂಡರಾದ ಶ್ರೀಶೈಲ ಅಂಗಡಿ, ಸುರೇಶ ಹೊಸಪೇಟಿ, ಕರೆಪ್ಪ ಮಂಟೂರ, ದುಂಡಪ್ಪ ಹಿಪ್ಪರಗಿ, ಅಶೋಕ ಕದಂ, ಅಣ್ಣಪ್ಪ ನಾವಿ, ಮಾರುತಿ ನಾವಿ, ಭೀಮಪ್ಪ ಯಡವನ್ನವರ ಮುಂತಾದವರು ಇದ್ದರು. ಜಾಣ ಕುರುಡರಾದ ಪುರಸಭೆ ಸಿಬ್ಬಂದಿ ಹಾಗೂ ಪುರಸಭೆ ಸದಸ್ಯರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕನಸಿನ ಯೋಜನೆಯದ ಇಂದಿರಾ ಕ್ಯಾಂಟೀನ್ ಅನ್ನು ಬಡ ದೀನ ದಲಿತರು ಕಾರ್ಮಿಕರು ಶ್ರಮಿಕ ವರ್ಗದ ಜನಾಂಗದವರಿಗೆ ಹಾಗೂ ಹಸಿದವರಿಗೆ ಒಂದು ತುತ್ತು ಅಣ್ಣ ದೊರೆಯಲಿ ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮುಗಳಖೋಡ,

ಹಾರೂಗೇರಿ ಕುಡಚಿ ಪುರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿವೆ. ಆದರೆ ಮುಗಳಖೋಡ ಮಾತ್ರ ಅವುಗಳ ನಿರ್ವಹಣೆ ಹಾಗೂ ಆಡಳಿತದ ಜವಾಬ್ದಾರಿಯು ಪುರಸಭೆ ಸಿಬ್ಬಂದಿ ಹಾಗೂ ಸದಸ್ಯರ ಹೊಣೆಯಾಗಿರುತ್ತದೆ ಎಂಬ ಅರಿವು ಅವರಿಗೆ ಇಲ್ಲದಾಗಿದೆ. ಪುರಸಭೆ ಸದಸ್ಯರು ಮತ್ತು ಮುಖ್ಯಾಧಿಕಾರಿಗಳು ಸಿಬ್ಬಂದಿ ವರ್ಗ ಜಾಣ ಕುರುಡರಂತೆ ಆಗಿದ್ದಾರೆಂದು ಆರೋಪಿಸಿ ರೈತ ಮುಖಂಡ ಶ್ರೀಶೈಲ ಅಂಗಡಿ ಹಾಗೂ ಸುರೇಶ ಹೊಸಪೇಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

 "ಸುಕ್ಷೇತ್ರ ಮುಗಳಖೋಡ ಒಂದು ಪುಣ್ಯಕ್ಷೇತ್ರವಗಿರುವುದರಿಂದ ದಾಸೋಹದ ಮಹಿಮೆಯನ್ನು ಶ್ರೀ ಯಲ್ಲಾಲಿಂಗ ಮಹಾಪ್ರಭುಗಳು, ಸಿದ್ದರಾಮ ಶಿವಯೋಗಿಗಳು ನಾಡಿಗೆ ತೋರಿಸಿದ್ದಾರೆ. ಅಂತಹ ಕ್ಷೇತ್ರದಲ್ಲಿ ಇದ್ದು ಇಂದಿರಾ ಕ್ಯಾಂಟೀನ್ ನಲ್ಲಿ ತಿನ್ನುವ ಆಹಾರವು ಸ್ವಚ್ಛತೆಯಿಂದ ಪರಿಶುದ್ಧವಾಗಿರಬೇಕು. ಆಹಾರ ಶುದ್ಧವಾಗಿರದೆ ಹೋದರೆ ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು". ಚೇತನ ಯಡವನ್ನವರ  ಸದಸ್ಯರು ಪುರಸಭೆ ಮುಗಳಖೋಡ. "ನಾಳೆ ಗುತ್ತಿಗೆದಾರರನ್ನು ಕರೆಯಿಸಿ ಇಂದಿರಾ ಕ್ಯಾಂಟೀನ್ ಗೆ ಬರುವ ಗ್ರಾಹಕರಿಗೆ ಪರಿಶುದ್ಧವಾದ ಆಹಾರ ನೀಡಬೇಕು ಇಲ್ಲದೇ ಹೋದರೆ ಟೆಂಡರ್  ರದ್ದು ಪಡಿಸಲಾಗುವುದು. ಈ ಬಗ್ಗೆ ಪುರಸಭೆಯಲ್ಲಿ ಸಭೆ ನಡೆಸುತ್ತೇನೆ".