ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿನಿ ಅನುರಾಧಾ ಆಯ್ಕೆ
ಮುಧೋಳ; ತಾಲೂಕಿನ ಚಿಚಖಂಡಿ ಕೆ.ಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಅನುರಾಧಾ ಅರ್ಜುಣಗಿ(ನಾಯಕಿ) ವೀಣಾ ಜುಂಜನ್ನವರ ಅವರು ಬಾಗಲಕೋಟ ಬವಿವಿ ಸಂಘದ ಇಂಜನಿಯರಿಂಗ್ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗಿಯಾಗಿ ವಿವಿದ ಮಣ್ಣುಗಳಲ್ಲಿ ಬೀಜಗಳ ಮೊಳಕೆ ಕುರಿತು ಮಂಡಿಸಿದ ವಿಜ್ಞಾನ ಮಾದರಿಗೆ ಪ್ರಥಮ ಸ್ಥಾನ ಲಬಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಮಾರ್ಗದರ್ಶಿ ಶಿಕ್ಷಕ ಎಲ್.ಎಸ್.ಕರಿಗೌಡರ ಹಾಗೂ ಮುಖ್ಯ ಗುರು ಐ.ಜಿ.ಅತ್ತಾರ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.