ಗುತ್ತಿಗೆದಾರ,ನಗರಸಭೆ ಅಭಿಯಂತರರ ಮೇಲೆ ಕ್ರಮಕ್ಕೆ ಒತ್ತಾಯ
ಲೋಕದರ್ಶನ ವರದಿ,
ಜಮಖಂಡಿ: ನಗರದ ಮುಧೋಳ ಬೈಪಾಸ್ ರಸ್ತೆಯಲ್ಲಿ ಬರತಕ್ಕ ಸರಕಾರಿ ಉದರ್ು ನಂ.5 ಶಾಲೆ ಹಿಂದಿರುವ ಜಾಗದಲ್ಲಿ ನಗರಸಭೆ ಎಸ್.ಎಫ್.ಸಿ ಅನುದಾನದಲ್ಲಿ 10ಲಕ್ಷ ವೆಚ್ಚದಲ್ಲಿ ಮಹಿಳೆಯರಿಗಾಗಿ ನಿರ್ಮಿಸಿದ ಶೌಚಾಲಯ ಗೋಡೆ ಬಿದ್ದು, ಚಾವಣಿ ಹಾಳಾಗಿದೆ. ವಿದ್ಯುತ್ ವ್ಯವಸ್ಥೆ ಮತ್ತು ನೀರಿನ ವ್ಯವಸ್ಥೆ ಕೂಡ ನೀಡಿರುವದಿಲ್ಲ. ಮಹಿಳಾ ಶೌಚಾಲಯ ಸಂಪೂರ್ಣ ದುರಸ್ಥುತಿಯಲ್ಲಿದೆ. ಕಳಪೆಮಟ್ಟದ ಕಾಮಗಾರಿ ಕೈಗೊಂಡಿರುವ ಗುತ್ತಿಗೆದಾರ ಮತ್ತು ನಗರಸಭೆ ಅಭಿಯಂತರರ ನೇರ ಹೊಣೆಗಾರರು. ಅವರ ಮೇಲೆ ಕ್ರಮಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ರಾಜೇಸಾಬ ಮಸಳಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳಾ ಶೌಚಾಲಯ ಬಿದ್ದಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತುಂಬಾ ತೊಂದೆರೆಯಾಗುತ್ತಿದೆ. ಸರಕಾರಿ ಉರ್ದು ಶಾಲೆ ಹತ್ತಿರ ಇರುವದರಿಂದ ಸಾರ್ವಜನಿಕರು ಬಯಲು ಶೌಚ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಗಬ್ಬು ವಾಸನೆಯೊಂದಿಗೆ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿರುವದಿಲ್ಲ. ಉಡಾಪೆ ಉತ್ತರ ನೀಡುತ್ತಿದ್ದಾರೆ. ಗುತ್ತಿಗೆದಾರ ಮತ್ತು ಅಭಿಯಂತರ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ. ಪೌರಾಯುಕ್ತರು ಮಹಿಳಾ ಶೌಚಾಲಯ ದುರಸ್ತಿಯೊಂದಿಗೆ ಮರುಬಳಕೆಗೆ ಅನುಕೂಲ ಮಾಡಿಕೊಡಲು ವಿಳಂಬ ಮಾಡಿದರೆ, ಅವರ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗಿತ್ತದೆಂದು ಆಕ್ರೋಶ ವ್ಯಕ್ತ ಪಡಿಸಿದರು.