ಕುಕನೂರ್

ನರೇಗಾದಡಿ ಕೈಗೊಂಡ ಮಾದರಿ ಶಾಲೆ ಕಾಮಗಾರಿ ಜಿಪಂ ಸಿಇಒ ವೀಕ್ಷಣೆ

ನರೇಗಾದಡಿ ಕೈಗೊಂಡ ಮಾದರಿ ಶಾಲೆ ಕಾಮಗಾರಿ ಜಿಪಂ ಸಿಇಒ ವೀಕ್ಷಣೆ

ಕುಕನೂರ 11: ನರೇಗಾ ಯೋಜನೆಯಡಿ ತಾಲೂಕಿನಲ್ಲಿ ಕೈಗೊಂಡ ಮಾದರಿ ಶಾಲೆ ಕಾಮಗಾರಿಗಳನ್ನು ವೀಕ್ಷಿಸಿದ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಫೌಜಿಯಾ ತರನ್ನುಮ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೊಪ್ಪಳ ಜಿಲ್ಲೆಯ ಕುಕನೂರ ಹಾಗೂ ಯಲಬುರ್ಗಾ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಮಾದರಿ ಶಾಲೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ತ್ಯಾಜ್ಯ ನಿರ್ವಹಣಾ ಘಟಕಗಳು, ಮಹಿಳೆಯರ ಶೌಚಾಲಯ, ಜೆಜೆಎಂ ಕಾಮಗಾರಿಗಳನ್ನು ಪರೀಶೀಲಿಸಿದರು.  

ಈ ವೇಳೆ ಮಾತನಾಡಿದ ಅವರು, ಕುದರಿಮೋತಿ ಗ್ರಾಮ ಪಂಚಾಯತಿಯ ಚಂಡಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗಿದೆ. ಎಲ್ಲಾ ಕಾಮಗಾರಿಗಳನ್ನು ಚನ್ನಾಗಿ ಮಾಡಿದ್ದಾರೆ. ಇದೇ ಮಾದರಿಯಲ್ಲಿ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ನಿರ್ಮಾಣವಾಗಲಿ ಎಂದು ತಿಳಿಸಿದರು.  

ಚಂಡಿನಾಳ ಶಾಲೆಯಲ್ಲಿ ನಿರ್ಮಾಣಗೊಂಡಿರುವ ಶಾಲಾ ತಡೆಗೋಡೆ, ಅಡುಗೆ ಕೊಣೆ, ಶೌಚಾಲಯ, ಅಟದ ಮೈದಾನ, ಕೈತೋಟ, ಸೋಕ್ ಪಿಟ್, ಮಳೆನೀರು ಕೊಯ್ಲು ಕಾಮಗಾರಿಗಳನ್ನು ಚನ್ನಾಗಿ ಮಾಡಿದ್ದಾರೆ. ಈಗ ಸರ್ಕಾರಿ ಶಾಲೆ ಮಕ್ಕಳಿಗೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳು ಲಭ್ಯವಾಗುವಂತೆ ಜಿಲ್ಲಾದ್ಯಂತ ನರೇಗಾದಡಿ ಮಾಡಲಾಗಿದೆ ಎಂದು ಹೇಳಿದರು.  

ಬೇವೂರ ಗ್ರಾಮದಲ್ಲಿ ನಡೆಯುತ್ತಿರುವ ಜೆಜೆಎಂ ಕಾಮಗಾರಿ ಇನ್ನಷ್ಟು ಚನ್ನಾಗಿ ಮಾಡಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ತಿಳಿಸಿದರು.  

ಬಳಿಕ ಮಂಗಳೂರು ಹಾಗೂ ಬೇವೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ತ್ಯಾಜ್ಯ ನಿರ್ವಹಣಾ ಘಟಕ, ಮಹಿಳೆಯರ ಶೌಚಾಲಯ ಕಾಮಗಾರಿಗಳ ಗುಣಮಟ್ವನ್ನು ಪರೀಶೀಲಿಸಿದರು.  ನಂತರ ಬೇವೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಮನೆ ಮನೆ ಕುಡಿಯುವ ನೀರಿನ ಕಾಮಗಾರಿಯನ್ನು ವೀಕ್ಷಿಸಿದರು.  

ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸೋಮಶೇಖರ್ ಬಿರಾದಾರ್, ಸಹಾಯಕ ನಿರ್ದೇಶಕರಾದ ರಾಮಣ್ಣ ದೊಡ್ಡಮನಿ, ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕರು, ಪಿಡಿಒ ಹಾಜರಿದ್ದರು. 


ಸುದ್ದಿ ಓದಿ