ಯೋಗವೇ ಆರೋಗ್ಯದ ಮೂಲ: ಡಾ.ವಿಜಯ ಮೈತ್ರಿ
Yoga is the source of health: Dr. Vijaya Maitri
ಲೋಕದರ್ಶನ ವರದಿ
ಜಮಖಂಡಿ 25: ಯೋಗವೇ ಆರೋಗ್ಯದ ಮೂಲವಾಗಿದೆ. ಪ್ರತಿಯೊಬ್ಬರು ಪ್ರತಿದಿನ ಯೋಗಾಭ್ಯಾಸ ಮಾಡಬೇಕು ಎಂದು ಡಾ.ವಿಜಯ ಮೈತ್ರಿ ಹೇಳಿದರು. ನಗರದ ಎಜಿಎಂ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನವನ್ನು ಉದ್ದೇಶಿಸಿ ಮಾತನಾಡಿದ ಅವರು, ಯೋಗದಿಂದ ಸಕಲ ರೋಗಗಳಿಗೂ ಪರಿಹಾರ ದೊರೆಯಲಿದೆ ಸನಾತನವಾದ ಯೋಗವನ್ನು ಪ್ರತಿಯೊಬ್ಬರು ದಿನಚರಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ, ಮುರಳಿಧರ ಬಡಿಗೇರ ಮಾತನಾಡಿ, ಯೋಗ ದೇಶದ ಸನಾತನ ಸಂಸ್ಕೃತಿಯ ಪ್ರತೀಕ ಮಾತ್ರವಲ್ಲದೇ ಆರೋಗ್ಯದ ಗುಟ್ಟಾಗಿದೆ ಯೋಗ ಪ್ರಾಣಾಯಾಮದಿಂದ ನಿರೋಗಿಗಳಾಗಿ ಜೀವನ ನಡೆಸಬಹುದು , ಆಧುನಿಕ ಜಗತ್ತು ಯೊಗದ ಮಹತ್ವವನ್ನು ತಿಳಿದು ವಿಶ್ವದೆಲ್ಲಡೆ ಯೋಗಾಭ್ಯಾಸ ನಡೆಸಲಾಗುತ್ತಿದೆ ಎಂದರು. ಕಾರ್ಯದರ್ಶಿ ಡಾ. ಅಕ್ಷಯಕುಮಾರ ಯೋಗಾಭ್ಯಾಸ ಹೇಳಿಕೊಟ್ಟರು. ಕಾಲೇಜು ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 